Monday, April 19, 2021
spot_imgspot_img
spot_imgspot_img

ಮಹಿಳೆಯ ಸರ ಎಳೆದು ಪರಾರಿಯಾದ ಆರೋಪಿಯನ್ನು ವಶಕ್ಕೆ ಪಡೆದ ಕೊಣಾಜೆ ಪೊಲೀಸರು

ಉಳ್ಳಾಲ: ಮನೆ ಸಮೀಪದ ತೋಟದಿಂದ ಸೋಗೆ ತರುತ್ತಿದ್ದ ಮಹಿಳೆಯ ಸರ ಎಳೆದು ಪರಾರಿಯಾದ ಕಳ್ಳನನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಾನೇಲ ನಿವಾಸಿ ಇರ್ಷಾದ್ (23) ಬಂಧಿತ ಆರೋಪಿಯಾಗಿದ್ದು. ಬೋಳಿಯಾರ್ ನಿವಾಸಿ ಶಾಂಭವಿ ಅವರು ತಮ್ಮ‌ಮನೆ ಸಮೀಪದ ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದಿದ್ದ ಆರೋಪಿ ಮಹಿಳೆಯ ಸರ ಎಳೆದು ಪರಾರಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ಬು ವಶಕ್ಕೆ ತೆಗೆದುಕೊಂಡಿದ್ದಾರೆ.

ಸರ ಎಳೆದ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಂಡಿರುವ ಇರ್ಷಾದ್ ಜನವರಿ ತಿಂಗಳಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಜಿದ್ದ ಯುವತಿಯ ಅತ್ಯಾಚಾರ ಯತ್ನಿಸಿ ಬಂಧಿತನಾಗಿದ್ದ. ಸಂಜೆ ಮನೆಗೆ ತೆರಳುತ್ತಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿ ಜೈಲು ಸೇರಿದ್ದ ಈತ ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

- Advertisement -

MOST POPULAR

HOT NEWS

Related news

error: Content is protected !!