




ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಹಾಗೂ ಅನಂತಾಡಿ ಉಭಯ ಗ್ರಾಮಗಳಿಗೆ ಸಂಬಂದಪಟ್ಟ ಇತೀಹಾಸ ಪ್ರಸಿದ್ಧ ಕರಿಂಕ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ಮೇ. 1-05 – 2025ನೇ ಗುರುವಾರ ರಾತ್ರಿ ಹಾಗೂ 2-05- 2025 ನೇ ಶುಕ್ರವಾರ ವೈಭವದಿಂದ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ನಡೆಯುವ ಗೊನೆ ಕಡಿಯುವ ಮೂಹೂರ್ತ ವನ್ನು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ರಾಮಚಂದ್ರ ಭಟ್ ಇವರು ಇಂದು ಬೆಳಿಗ್ಗೆ 9.45ರ ಸುಮುಹೂರ್ತದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನರೇಂದ್ರ ರೈ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕಿರಣ್ ಹೆಗ್ಡೆ, ಸೇಸಪ್ಪ ಗೌಡ ನೆಟ್ಲಮುಡ್ನೂರು ಗ್ರಾಮದ ಶ್ರೀ ಕ್ಷೇತ್ರದ ಭಕ್ತರಾದ ಬಿ, ಚೇತನ್ ರೈ, ಡಾ.ಮನೋಹರ ರೈ, ಜಗನ್ನಾಥ ಶೆಟ್ಟಿ ಕರಿಂಕ, ಚೇತನ್ ಶೆಟ್ಟಿ, ಹೊಸ ಒಕ್ಲು, ದಾಮೋದರ ಕಾಪಿಕ್ಕಾಡ್, ಜತ್ತಪ್ಪ ಪೂಜಾರಿ ಕರಿಂಕ, ಡೊಂಬಯ್ಯ ಗೌಡ ಕರಿಂಕ ಹಾಗೂ ದೇವಸ್ಥಾನದ ಪ್ರಭಂಧಕ ಗೌರೀಶ್ ಶೆಟ್ಟಿ ಉಪಸ್ಥಿತರಿದ್ದರು.

ದಿನಾಂಕ 01-02-205ನೇ ಗುರುವಾರ ರಾತ್ರಿ ಗಂಟೆ 8ರಿಂದ ಮಹೋತ್ಸವ ಬಲಿ, ಭೂತ ಬಲಿ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಜಿಲ್ಲೆಯ ಹೆಸರಾಂತ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
2-05- 2025 ನೇ ಶುಕ್ರವಾರ ಬೆಳಿಗ್ಗೆ ಗಂಟೆ 9.30 ರಿಂದ ಹಗಲು ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ ನಡೆದು ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ದಿನಾಂಕ 12-05-2025 ನೇ ಸೋಮವಾರ ಬೆಳಿಗ್ಗೆ ಗಂಟೆ 9 ರಿಂದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಪ್ರಯುಕ್ತ ಗಣಪತಿ ಹೋಮ, ಕಲಶಾಭಿಷೇಕ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ಬಳಿಕ ರಾತ್ರಿ ಗಂಟೆ 7 ರಿಂದ ಮಹಾರಂಗಪೂಜೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಕ್ಷೇತ್ರದ ಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ನರೇಂದ್ರ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.