Friday, March 29, 2024
spot_imgspot_img
spot_imgspot_img

ಡೂಡಲ್ ಕೇಕ್ ನೊಂದಿಗೆ ವಿಶೇಷ ರೀತಿಯಲ್ಲಿ ತನ್ನ 23ನೇ ಜನ್ಮದಿನವನ್ನು ಆಚರಿಸುತ್ತಿರುವ ಗೂಗಲ್!

- Advertisement -G L Acharya panikkar
- Advertisement -

ಸರ್ಚ್ ಇಂಜಿನ್ ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ಸೆ.27, ಸೋಮವಾರ ಆಚರಿಸಿಕೊಳ್ಳುತ್ತಿದೆ. ಗೂಗಲ್ ತನ್ನ ಮುಖಪುಟದಲ್ಲಿ ಕೇಕ್ ಚಿತ್ರವನ್ನು ಹಂಚಿಕೊಂಡಿದೆ. ಗೂಗಲ್ ಅಕ್ಷರಗಳಿಗೆ ಚಾಕಲೇಟ್ ಕೇಕ್ ಮತ್ತು L ಅಕ್ಷರವು ಮೇಣದಬತ್ತಿಯಾಗಿದ್ದು ದೀಪದಿಂದ ಬೆಳಗುತ್ತಿದೆ. ಕೇಕ್​ನ ಮೇಲೆ 23 ಎಂದು ಬರೆಯಲಾಗಿದೆ.

ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​ನೊಂದಿಗೆ ಆಚರಿಸುತ್ತಿದೆ. ತಾಂತ್ರಿಕವಾಗಿ 1998, ಸೆಪ್ಟೆಂಬರ್ 4ರಂದು ಸ್ಥಾಪನೆಯಾಯಿತು. ಸರ್ಚ್ ಇಂಜಿನ್ ಇತಿಹಾಸ 1996ಕ್ಕಿಂತಲೂ ಹಿಂದಿನದು. ಕಂಪನಿಯು ಸೆಪ್ಟೆಂಬರ್​ 27 ಅನ್ನು ಸಾಂಪ್ರದಾಯಿಕವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸುವ ದಿನವಾಗಿ ಆಯ್ಕೆ ಮಾಡಿದೆ.

ಪ್ರತಿದಿನ ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ಭಾಷೆಗಳಲ್ಲಿ ಗೂಗಲ್​ನಲ್ಲಿ ಶತಕೋಟಿ ಹುಡುಕಾಟಗಳು ನಡೆಯುತ್ತವೆ. ಜಾಗತಿಕವಾಗಿ 20ಕ್ಕೂ ಹೆಚ್ಚು ಡೇಟಾ ಸೆಂಟರ್​ಗಳಲ್ಲಿ ಪ್ರಪಂಚದ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶದೊಂದಿಗೆ ಸಾಗುತ್ತಿದೆ.

ಇದನ್ನೂ ಓದಿ: ವಿಟ್ಲ: ಕೇಸರಿ ಶಾಲು ಧರಿಸಿದರೆ ಹುಷಾರ್; ಅಡ್ಯನಡ್ಕದಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು

ಕ್ಯಾಲಿಫೋರ್ನಿಯಾದ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ 1998, ಸೆಪ್ಟೆಂಬರ್ 4ರಂದು ಗೂಗಲ್ಅನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷದಲ್ಲಿ ಇಬ್ಬರೂ ಮೂಲ ಸರ್ಚ್ ಇಂಜಿನ್ಅನ್ನು ಆರಂಭಿಸಿದರು. ಅಂದಿನಿಂದ 23 ವರ್ಷಗಳವರೆಗೂ ಗೂಗಲ್ ಎಲ್ಲೆಡೆ ಇದೆ. 2015 ಅಕ್ಟೋಬರ್ 24ರಂದು ಲ್ಯಾರಿ ಪೇಜ್ ಬದಲಿಗೆ ಸುಂದರ್ ಪಿಚೈ ಗೂಗಲ್​ನ ಸಿಇಒ ಆಗಿ ನೇಮಕಗೊಂಡರು.

- Advertisement -

Related news

error: Content is protected !!