

ಶ್ರೀ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ, ಬೆಂಗಳೂರು ಇದರ ಸಂಸ್ಥಾಪಕರೂ ಬಡವರ ಬಂಧು ಶ್ರೀ ಯುತ ಗೋವಿಂದ ಬಾಬು ಪೂಜಾರಿಯವರು ಕೃಷ್ಣಾಷ್ಟಮಿಯ ಶುಭದಿನದಂದು ಕೊಲ್ಯ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ ಗುರುವರ್ಯರ ಅನುಗ್ರಹ ಪಡೆದರು. ಈ ಸುಸಂದರ್ಭದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷರೂ, ಶ್ರೀ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ನಿರ್ದೇಶಕರಾದ ಕಿಶನ್ ಪೂಜಾರಿ ಇವರು ಉಪಸ್ಥಿತರಿದ್ದರು.
ಹಲವಾರು ವಿಧದ ಪುಣ್ಯ ಸೇವಾಕಾರ್ಯವನ್ನು ನಿರಂತರವಾಗಿ ಸಮಾಜಕ್ಕೆ ಅರ್ಪಿಸಿಕೊಂಡು ಬಂದಿರುವಂತಹ ಶ್ರೀ ಯುತ ಗೋವಿಂದ ಬಾಬು ಪೂಜಾರಿ ಇವರನ್ನು ಯುವವಾಹಿನಿ(ರಿ.)ಕೊಲ್ಯ ಘಟಕ ಮತ್ತು ಕೊಲ್ಯ ಬಿಲ್ಲವ ಸಂಘದ ಸರ್ವ ಸದಸ್ಯರ ಪರವಾಗಿ ಗುರುವರ್ಯರ ಪುಣ್ಯ ಪ್ರಸಾದದೊಂದಿಗೆ ಶಾಲು,ಹಾರ ಮತ್ತು ಫಲವಸ್ತು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟ್ಟಸ್ಟ್ ನ ಅಧ್ಯಕ್ಷರೂ ನಾರಾಯಣ ಗುರು
ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ವೇಣುಗೋಪಾಲ್ ಕೊಲ್ಯ,ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಲ್ಯ,ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರೂ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಮೋಹನ್ ಮಾಡೂರು,ಟ್ರಸ್ಟ್ ನ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಸೋಮೇಶ್ವರ,ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಶ್ರೀಧರ್.ಎಚ್.ಕನೀರುತೋಟ,ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಈಶ್ವರ ಸುವರ್ಣ ಕನೀರುತೋಟ,ಸಂಘದ ಕಾರ್ಯದರ್ಶಿ ಜಯಂತ ಪರ್ಯತ್ತೂರು,ಯುವವಾಹಿನಿ(ರಿ.)ಕೊಲ್ಯ ಘಟಕದ ಸ್ಥಾಪಕ ಅಧ್ಯಕ್ಷರಾದ ಸುರೇಶ್.ಬಿ.ಕೊಲ್ಯ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾರಾಯಣ ಗುರು ಕೊ-ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಆನಂದ ಮಲಯಾಳಕೋಡಿ,
ಸಂಘದ ಮಾಜಿ ಅಧ್ಯಕ್ಷರೂ ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಬಾಳಪ್ಪ ಪೂಜಾರಿ,ಸಂಘದ ಹಿರಿಯ ಸದಸ್ಯರೂ, ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಮುತ್ತಪ್ಪ ಪೂಜಾರಿ ಕುಂಪಲ, ಟ್ರಸ್ಟ್ ನ ಸದಸ್ಯರಾದ ಗಣೇಶ್.ಎಸ್.ಜಿ.ಕೆ, ಸಂಘದ ಹಿರಿಯ ಸದಸ್ಯರಾದ ರಾಮ ಪರ್ಯತ್ತೂರು,ಸಂಘದ ಸದಸ್ಯರಾದ ಮಾಧವ ಪರ್ಯತ್ತೂರು,ಟ್ರಸ್ಟಿ ರಾಘವ ಮಾಸ್ಟರ್, ಯುವವಾಹಿನಿ(ರಿ.) ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರೂ ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ರವಿ ಕೊಂಡಾಣ, ಕೊಲ್ಯ ಘಟಕದ ಪ್ರಥಮ ಉಪಾಧ್ಯಕ್ಷರೂ ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಸುಂದರ ಸುವರ್ಣ, ಕೊಲ್ಯ ಘಟಕದ ದ್ವಿತೀಯ ಉಪಾಧ್ಯಕ್ಷರಾದ ಲತೀಶ್.ಎಂ ಸಂಕೊಳಿಗೆ, ಕೊಲ್ಯ ಘಟಕದ ಸದಸ್ಯರೂ ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ರಘುರಾಮ ಸುವರ್ಣ, ಕೊಲ್ಯ ಘಟಕದ ಸದಸ್ಯರಾದ ಯತೀಶ್ ವೆಂಕುಹಿತ್ಲು,
ಕೊಲ್ಯ ಬಿಲ್ಲವ ಸಂಘದ ಸದಸ್ಯರಾದ ಶೇಖರ ಕನೀರು ತೋಟ, ಯುವವಾಹಿನಿ(ರಿ.)ಕೊಲ್ಯ ಘಟಕದ ಕಾರ್ಯದರ್ಶಿ ಶಿರಲ್ ಕೊಲ್ಯ,ಯುವವಾಹಿನಿ(ರಿ.)ಕೊಲ್ಯ ಘಟಕದ ಮಾಜಿ ಕಾರ್ಯದರ್ಶಿ ಹಾಗೂ ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಶ್ರೀಮತಿ ಸುಧಾಸುರೇಶ್,ಕೊಲ್ಯ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣದ ನಿರ್ದೇಶಕರಾದ ಜೀವನ್ ಕೊಲ್ಯ,ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಶ್ರೀಮತಿ ಅರ್ಚನಾ.ಎಂ.ಬಂಗೇರ,ಕೊಲ್ಯ ಘಟಕದ ಪ್ರಚಾರ ನಿರ್ದೇಶಕರಾದ ನಿತಿನ್ ಮಾಡೂರು,ಕೊಲ್ಯ ಘಟಕದ ಕ್ರೀಡೆ ಮತ್ತು ಆರೋಗ್ಯದ ನಿರ್ದೇಶಕರಾದ ಶಶಿಕಾಂತ್ ಪರ್ಯತ್ತೂರು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂದಿರದ ಪೂಜಾ ಸಂಚಾಲಕರಾದ ಪುರುಷೋತ್ತಮ ಅಡ್ಕ ಇವರು ಗುರುವರ್ಯರಿಗೆ ಪೂಜೆ ಸಲ್ಲಿಸಿ ಶ್ರೀಯುತ ಗೋವಿಂದ ಬಾಬು ಪೂಜಾರಿಯವರ ಬಾಳು ಬೆಳಗಲೆಂದು ಗುರುವರ್ಯರಲ್ಲಿ ಪ್ರಾರ್ಥಿಸಿದರು.
ಗುರುವರ್ಯರ ಪ್ರಸಾದ ಹಾಗೂ ನಮ್ಮ ಸಂಸ್ಥೆಯ ಗೌರವ ಸ್ವೀಕರಿಸಿದ ಶ್ರೀಯುತ ಗೋವಿಂದ ಬಾಬು ಪೂಜಾರಿ ಯವರು ಮಾತನಾಡಿ ಹರ್ಷ ವ್ಯಕ್ತಪಡಿಸಿದರು.
ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಕೋಶಾಧಿಕಾರಿ ಹಾಗೂ ನಾರಾಯಣ ಗುರು ಸೊಸೈಟಿ ಬೆಂಗಳೂರು ಇದರ ಸದಸ್ಯರಾದ ಕುಸುಮಾಕರ ಕುಂಪಲ ಇವರು ಗೋವಿಂದ ಬಾಬು ಪೂಜಾರಿ ಇವರನ್ನು ಸ್ವಾಗತಿಸಿ ಶ್ರೀಯುತರ ಸೇವಾಕೈಂಕರ್ಯದ ವಿಚಾರಗಳನ್ನು ನೆರೆದವರಿಗೆ ಎಳೆ ಎಳೆಯಾಗಿ ತಿಳಿಯಪಡಿಸಿ ಸರ್ವರ ಪರವಾಗಿ ಶುಭಹಾರೈಸಿ, ವಂದಿಸಿದರು.




