Friday, September 25, 2026
spot_imgspot_img
spot_imgspot_img

ಪುತ್ತೂರಿನ ಸೇಡಿಯಾಪುನಲ್ಲಿ ನಿರ್ಮಾಣವಾಗಲಿರುವ ಬೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ

- Advertisement -
- Advertisement -

ಪುತ್ತೂರಿನ ಸೇಡಿಯಾಪುನಲ್ಲಿ ನಿರ್ಮಾಣವಾಗಲಿರುವ 300 ಹಾಸಿಗೆಗಳ ಬೋಧನಾ ಮೆಡಿಕಲ್ ಆಸ್ಪತ್ರೆಯ ನಿರ್ಮಾಣ ಕಾರ್ಯಕ್ಕೆ ಇಂದು, ಸೆಪ್ಟೆಂಬರ್ 25 ಭೂಮಿಪೂಜೆ ನೆರವೇರಿಸಲಾಗಿದೆ.

ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಾಗಿ ಒಟ್ಟು ₹549.79 ಕೋಟಿ ಅನುದಾನವನ್ನು ಮಂಜೂರು ಮಾಡಿ ಅನುಮೋದನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಆಸ್ಪತ್ರೆಯ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಇದರ ಒಟ್ಟು ಯೋಜನಾ ವೆಚ್ಚ ₹549.79 ಕೋಟಿಗಳಾಗಿದ್ದು, ಇದರಲ್ಲಿ ಮೆಡಿಕಲ್ ಕಾಲೇಜು, ಸುಸಜ್ಜಿತ ಬೋಧನಾ ಆಸ್ಪತ್ರೆ ಮತ್ತು ಹಾಸ್ಟೆಲ್ ಒಳಗೊಂಡಿರುತ್ತದೆ. ಬೋಧನಾ ಆಸ್ಪತ್ರೆಯ ಸಿವಿಲ್ ಕಾಮಗಾರಿಗಳಿಗಾಗಿಯೇ ಸುಮಾರು ₹180 ಕೋಟಿ ಮೀಸಲಿಡಲಾಗಿದೆ.

ಪ್ರಾಥಮಿಕ ಹಂತದಲ್ಲಿ 300 ಹಾಸಿಗೆಗಳ (ಬೆಡ್) ಸಾಮರ್ಥ್ಯದ ಐದು ಅಂತಸ್ತುಗಳ ಬೃಹತ್ ಕಟ್ಟಡ ತಲೆ ಎತ್ತಲಿದ್ದು, ಮುಂದಿನ ದಿನಗಳಲ್ಲಿ ಇದನ್ನು 650 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಸೇಡಿಯಾಪು ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಹಾಗೂ ವಿದ್ಯುತ್ ಲೈನ್ ಶಿಫ್ಟಿಂಗ್ ಸೇರಿದಂತೆ ಪೂರ್ವಸಿದ್ಧತಾ ಕೆಲಸಗಳು ಈಗಾಗಲೇ ಭರದಿಂದ ಸಾಗುತ್ತಿವೆ.ಸದ್ಯ ಶುಭ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಅಧಿಕೃತ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

- Advertisement -

Related news

error: Content is protected !!