- Advertisement -
- Advertisement -





ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹ ಸಾರ್ವಕಾಲಿಕ ದಾಖಲೆ ಬರೆದಿದ್ದು, 2.36 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 12.6 ರಷ್ಟು ಹೆಚ್ಚಾಗಿದೆ.ಏಪ್ರಿಲ್ ನಲ್ಲಿ ಒಟ್ಟು ಜಿಎಸ್ ಟಿ ಆದಾಯ 2.36 ಲಕ್ಷ ಕೋಟಿ ರೂಪಾಯಿ ಸಂಗ್ರವಾಗಿದ್ದು, ಇದು ಕಳೆದ ವರ್ಷದ ಏಪ್ರಿಲ್ ನಲ್ಲಿ ಸಂಗ್ರಹವಾಗಿದ್ದ 2.10 ಲಕ್ಷ ಕೋಟಿ ರೂ. ಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ಶೇ. 12.6 ರಷ್ಟು ಹೆಚ್ಚಳವಾಗಿದೆ.
ದೇಶೀಯ ವಹಿವಾಟುಗಳಿಂದ ಬರುವ ಒಟ್ಟು ಆದಾಯವು ಶೇ. 10.7 ರಷ್ಟು ಹೆಚ್ಚಾಗಿ 1.89 ಲಕ್ಷ ಕೋಟಿ ರೂ. ಗೆ ತಲುಪಿದ್ದರೆ, ಆಮದುಗಳಿಂದ ಬರುವ ಆದಾಯವು ಶೇ. 21 ರಷ್ಟು ಹೆಚ್ಚಾಗಿ 46,900 ಕೋಟಿ ರೂ. ಗಳಿಗೆ ತಲುಪಿದೆ. ಒಟ್ಟು ಮರುಪಾವತಿಗಳು ಶೇ. 48 ರಷ್ಟು ಹೆಚ್ಚಾಗಿ 27,341 ಕೋಟಿ ರೂ. ಗಳಿಗೆ ತಲುಪಿದೆ.
- Advertisement -