Sunday, June 21, 2026
spot_imgspot_img
spot_imgspot_img

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಸೋಂಕು.!

- Advertisement -
- Advertisement -

ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ  ಕೊರೊನಾ ವರದಿ ಪಾಸಿಟಿವ್ ಬಂದಿರೋದನ್ನ ಉಪರಾಷ್ಟ್ರಪತಿಗಳ ಕಚೇರಿ ಟ್ವಿಟ್ಟರ್ ಮೂಲಕ ಖಚಿತ ಪಡಿಸಿದೆ.

ಇಂದು ಬೆಳಗ್ಗೆ ಎಂದಿನಂತೆ ವೆಂಕಯ್ಯ ನಾಯ್ಡು ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢಪಟ್ಟಿದೆ. ಉಪರಾಷ್ಟ್ರಪತಿಗಳು ಆರೋಗ್ಯವಾಗಿದ್ದು, ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ.

 ವೈದ್ಯರ ಸಲಹೆ ಮೇರೆಗೆ ವೆಂಕಯ್ಯ ನಾಯ್ಡು ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇನ್ನು ಅವರ ಪತ್ನಿ ಶ್ರೀಮತಿ ಉಷಾ ನಾಯ್ಡು ಅವರ ವರದಿ ನೆಗೆಟಿವ್ ಬಂದಿದ್ದು, ಸ್ವಪ್ರೇರಿತವಾಗಿ ಐಸೋಲೇಷನ್ ನಲ್ಲಿದ್ದಾರೆ ಎಂದು ಉಪರಾಷ್ಟ್ರಪತಿಗಳ ಕಚೇರಿ ತಿಳಿಸಿದೆ.

- Advertisement -

Related news

error: Content is protected !!