Friday, April 26, 2024
spot_imgspot_img
spot_imgspot_img

ಮಾದರಿ ಕೆರೆಯಾಗಿ ಗುಜ್ಜರಕೆರೆ ಅಭಿವೃದ್ಧಿಪಡಿಸಲಾಗುವುದು – ಶಾಸಕ ಕಾಮತ್.

- Advertisement -G L Acharya panikkar
- Advertisement -

ಮಂಗಳೂರು:- ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಾದ ಮಂಗಳಾದೇವಿ ಹಾಗೂ ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ಸಂಬಂಧಪಟ್ಟ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಸಲು ಸ್ಥಳಕ್ಕೆ ಆಗಮಿಸಿದ ಸಂದರ್ಭ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ಅನೇಕ ಪುರಾತನ ಕೆರೆಗಳು ನಾಮಾವಶೇಷವಾಗಿದೆ. ಇನ್ನುಳಿದ ಕೆರೆಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ನೀಡುವ ಜವಬ್ದಾರಿ ನಮ್ಮದಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಗುಜ್ಜರಕೆರೆ ಅಭಿವೃದ್ಧಿಯ ಕುರಿತು ಅನೇಕ ವರ್ಷಗಳಿಂದ ಇಲ್ಲಿನ ಸಾರ್ವಜನಿಕರು ಮನವಿ‌ಸಲ್ಲಿಸುತ್ತಿದ್ದಾರೆ. ಕೆರೆಯ ವಿಚಾರದಲ್ಲಿ ಧಾರ್ಮಿಕತೆಗೆ ಸಂಬಂಧಿಸಿಗಸಿದಂತೆ ಈ ಪರಿಸರದ ಜನರು ಅನನ್ಯ ಸಂಬಂಧ ಹೊಂದಿದ್ದಾರೆ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿ ಸೇರಿಸಿ ಮಾದರಿ ಕೆರೆಯನ್ನಾಗಿಸಲಾಗುವುದು ಎಂದರು.

ಈಗಾಗಲೇ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಸರಿ ಸುಮಾರು 15 ಅಡಿಗಳಷ್ಟು ಆಳ ಹೂಳು ತುಂಬಿಕೊಂಡಿದ್ದು ಸಂಪೂರ್ಣವಾಗಿ‌ ಸ್ವಚ್ಛಗೊಳಿಸಿದ ನಂತರ ನೀರು ಕಲುಷಿತಗೊಳ್ಳದಂತೆ, ತಡೆಗೋಡೆಗಳ ದುರಸ್ತಿ ಹಾಗೂ ಕೆರೆಯ ನೀರು ಉಪಯೋಗಕ್ಕೆ ಯೋಗ್ಯವಾಗುವಂತೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು‌ ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೇರೇಟರ್ ರೇವತಿ‌ ಶ್ಯಾಮ್ ಸುಂದರ್, ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಭಾನುಮತಿ,ಶೈಲೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ದೀಪಕ್ ಪೈ, ಭಾರತಿ ರಾವ್, ಯಶವಂತ್, ರಾಜೇಂದ್ರ, ದಿನೇಶ್, ಶಿವಪ್ರಸಾದ್, ಪ್ರಮೋದ್, ಪುಷ್ಪರಾಜ್ ಶೆಟ್ಟಿ, ಸುನಿಲ್ ಸಾಲ್ಯಾನ್, ದಿನೇಶ್, ಸುಜಾತಾ ಆಳ್ವಾ, ಹೇಮ ಅರಕೆರೆ, ಅನಿಲ್ ಕೊಟ್ಟಾರಿ, ಅಮಿತ್ ಶೆಟ್ಟಿ, ಗುಜ್ಜರಕೆರೆ ತೀರ್ಥ ಸಮಿತಿಯ ಪ್ರಮುಖರಾದ ನೇಮು ಕೊಟ್ಟಾರಿ, ತಾರನಾಥ ಶೆಟ್ಟಿ, ಯೋಗಿಶ್ ಕುಮಾರ್, ಸಿ.ಪಿ ದಿನೇಶ್, ಉದಯ್ ಶಂಕರ್, ಉಮಾ ಶಂಕರ್, ನಾರಾಯಣ ಶೆಟ್ಟಿ, ಮಾಧವ ವೆಂಕಟೇಶ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!