Tuesday, June 9, 2026
spot_imgspot_img
spot_imgspot_img

ವಿಟ್ಲ: (ಡಿ.15) ಕುಳ-ಕುಂಡಡ್ಕ ಗುಣಶ್ರೀ ವಿದ್ಯಾಲಯದ ವಾರ್ಷಿಕೋತ್ಸವ

- Advertisement -
- Advertisement -

ವಿಟ್ಲ: ಗುಣಶ್ರೀ ವಿದ್ಯಾಲಯ ಕುಳ-ಕುಂಡಡ್ಕ ಇದರ ವಾರ್ಷಿಕೋತ್ಸವವು ಡಿ.15 ರಂದು ಶುಕ್ರವಾರ ನಡೆಯಲಿದೆ.

ಸಂಜೆ 5.30ಕ್ಕೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಮಂಗಳೂರು ಮನ್‌ದೇವ್ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಇಡ್ಕಿದು ಸಹಕಾರಿ ಸೇವಾ ನಿಯಮಿತ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಸತೀಶ್ ಆಳ್ವ ಉದ್ಯಮಿಗಳು ವಿಟ್ಲ, ವೆಟರ್ನರಿ ನಿರೀಕ್ಷಕರು ಮಂದರ ಜೈನ್, ಪ್ರಗತಿಪರ ಕೃಷಿಕ ಚೇತನ್ ಮರುವಾಳ ಭಾಗವಹಿಸಲಿದ್ದಾರೆ.

ರಾತ್ರಿ 8 ಕ್ಕೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಗುಣಶ್ರೀ ವಿದ್ಯಾಲಯ ಕುಳ ಇದರ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ, ಸಹಸಂಚಾಲಕ ಯತೀಶ್ ಬೇರಿಕೆ ತಿಳಿಸಿದ್ದಾರೆ.

- Advertisement -

Related news

error: Content is protected !!