Tuesday, July 21, 2026
spot_imgspot_img
spot_imgspot_img

ಉಪ್ಪಿನಂಗಡಿ : ಗುಂಡ್ಯದಲ್ಲಿ ಅನ್ಯಕೋಮಿನ ಜೋಡಿ ಪ್ರಕರಣ; ಬಂಧಿತ ಹಿಂದೂ ಕಾರ್ಯಕರ್ತರಿಗೆ ಜಾಮೀನು ಮಂಜೂರು

- Advertisement -
- Advertisement -

ಉಪ್ಪಿನಂಗಡಿ : ಹಿಂದೂ ಯುವತಿ ಮತ್ತು ಅನ್ಯಕೋಮಿನ ಯುವಕನ ಜೋಡಿಯನ್ನು ಗುಂಡ್ಯ ಸಮೀಪ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಯುವಕ ಕೆಲವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ಬಂಧಿತರಾಗಿದ್ದ ಸಿರಿಬಾಗಿಲು ಅನಿಲ ಮನೆ ನಿವಾಸಿ ಬಾಲಚಂದ್ರ(35), ಸಿರಿಬಾಗಿಲು ದೇರಣೆ ನಿವಾಸಿ ರಂಜಿತ್ (31) ರವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.ಬಂಧಿತರ ಪರವಾಗಿ ಖ್ಯಾತ ವಕೀಲರಾದ ಹರೀಶ್ ಬೂಡು ಪಣಿ ಮತ್ತು ಚಿನ್ಮಯ್ ರೈ ಈಶ್ವರಮಂಗಲ ವಾದಿಸಿದರು.

ಚಿನ್ಮಯ್ ಈಶ್ವರಮಂಗಲ

ಯಾವುದೇ ಫಲಾಪೇಕ್ಷೆ ಬಯಸದೆ ಜಾಮೀನು ಒದಗಿಸಿದ ವಕೀಲರಾದ ಚಿನ್ಮಯ್ ಈಶ್ವರಮಂಗಲ ಮತ್ತು ಹರೀಶ್ ಬೂಡುರವರಿಗೆ ಹಿಂದೂ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ.

ಗುಂಡ್ಯದ ಗುಡ್ಡದಲ್ಲಿ ಭಿನ್ನಕೋಮಿನ ಜೋಡಿ ಪತ್ತೆ ಪ್ರಕರಣ: ಇಬ್ಬರ ಬಂಧನ..!

- Advertisement -

Related news

error: Content is protected !!