Tuesday, May 21, 2024
spot_imgspot_img
spot_imgspot_img

ಫಿಫಾ ಮಹಿಳಾ ವಿಶ್ವಕಪ್ ಪಂದ್ಯಕ್ಕಾಗಿ ತಂಡಗಳು ತಂಗಿದ್ದ ಹೋಟೆಲ್​ ಬಳಿ​ ಗುಂಡಿನ ದಾಳಿ

- Advertisement -G L Acharya panikkar
- Advertisement -

ಜುಲೈ 20 ರಿಂದ 32 ದೇಶಗಳ ಮಹಿಳಾ ತಂಡಗಳ ನಡುವೆ ಫಿಫಾ ವಿಶ್ವಕಪ್ ಆರಂಭವಾಗಲಿದೆ ಹಾಗಾಗಿ ಮೊದಲ ಪಂದ್ಯಕ್ಕಾಗಿ ಆಕ್ಲೆಂಡ್​ನ ಹೋಟೆಲ್​ನಲ್ಲಿ ಮಹಿಳಾ ತಂಡಗಳು ತಂಗಿದ್ದ ಸಮಯದಲ್ಲಿ ಹೋಟೆಲ್​ ಬಳಿ​ ಶೂಟರ್ ಒಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಶೂಟರ್  ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಇಂದಿನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ನಾರ್ವೆ ತಂಡಗಳು ಆಕ್ಲೆಂಡ್​ನಲ್ಲಿ ಮುಖಾಮುಖಿಯಾಗುತ್ತಿದ್ದರಿಂದ  ನಾರ್ವೆ ತಂಡ ಆಕ್ಲೆಂಡ್​ನಲ್ಲಿ ವಾಸ್ತವ್ಯ ಹೂಡಿದೆ.  ನಾರ್ವೆ ತಂಡ ತಂಗಿರುವ ಹೋಟೆಲ್​ನಿಂದ ಕೇವಲ 300 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.

ಘಟನೆಯ ಬಗ್ಗೆ ಮಾತನಾಡಿರುವ ನಾರ್ವೆ ತಂಡದ ನಾಯಕಿ ಮಾರೆನ್ ಮ್ಜೆಲ್ಡೆ, ಮೊದಲಿಗೆ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ. ಆದರೆ ಅಂತಿಮವಾಗಿ ಟಿವಿ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ ಎಂದಿದ್ದಾರೆ.

ಇನ್ನು ಘಟನೆ ನಡೆದ ಬಳಿಕ ನಾರ್ವೆ ತಂಡವನ್ನು ಹೆಲಿಕಾಪ್ಟರ್ ಮೂಲಕ ಬೇರೆ ಹೋಟೆಲ್​ಗೆ ಸ್ಥಳಾಂತರಿಸಲಾಗಿದೆ .

- Advertisement -

Related news

error: Content is protected !!