Friday, July 11, 2025
spot_imgspot_img
spot_imgspot_img

ಕನ್ಯಾನ ಮತ್ತು ಕರೋಪಾಡಿ ಶಕ್ತಿಕೇಂದ್ರದ ವತಿಯಿಂದ ಗುರು ಪೂರ್ಣಿಮೆ ಕಾರ್ಯಕ್ರಮ

- Advertisement -
- Advertisement -

ಕನ್ಯಾನ ಮತ್ತು ಕರೋಪಾಡಿ ಶಕ್ತಿಕೇಂದ್ರದ ವತಿಯಿಂದ ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ಹಾಗೂ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಇವರಿಗೆ ಫಲ, ವಸ್ತ್ರ ಸಮರ್ಪಿಸಿ ತುಳಸಿ ಮಾಲಾರ್ಪಣೆ ಮಾಡಿ ಗುರುಪೂರ್ಣಿಮೆಯ ಮಾರ್ಗದರ್ಶನವನ್ನು ಪಡೆದು ಆಶೀರ್ವಾದವನ್ನು ಪಡೆಯಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಬಂಟ್ವಾಳ ಮಂಡಲ ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಕನ್ಯಾನ, ಕರೋಪಾಡಿ ಶಕ್ತಿಕೇಂದ್ರ ಪ್ರಮುಖ್ ಮೋಹನ ಪಳ್ಳದಕೋಡಿ, ಕನ್ಯಾನ ಶಕ್ತಿಕೇಂದ್ರ ಪ್ರಮುಖ್ ಮಾತೇಷ್ ಭಂಡಾರಿ, ವಿವಿಧ ಪ್ರಕೋಷ್ಠ ಪದಾಧಿಕಾರಿಗಳು, ಬೂತ್ ಸಮಿತಿ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!