Sunday, July 19, 2026
spot_imgspot_img
spot_imgspot_img

ರಾಜ್ಯಕ್ಕೆ ಕಾಲಿಟ್ಟಿದೆ H5N1 ವೈರಸ್ ಹಕ್ಕಿ ಜ್ವರ..!

- Advertisement -
- Advertisement -

ಬೆಂಗಳೂರು: ರಾಜ್ಯಕ್ಕೆ H5N1 ವೈರಸ್ ಹಕ್ಕಿ ಜ್ವರ ಕಾಲಿಟ್ಟಿದ್ದು, ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ ವೈರಸ್ ಪತ್ತೆಯಾಗಿದೆ.

ಮೊದಲ ತಪಾಸಣೆಯಲ್ಲೆ ಎಚ್5ಎನ್1 ವೈರಸ್ ಪತ್ತೆಯಾಗಿದ್ದು, ಈ ಹಿನ್ನೆಲೆ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿರುವ ಕೋಳಿಗಳನ್ನ ಗುಂಡಿ ತೆಗೆದು ಮುಚ್ಚಲಾಗಿದೆ.

ಪೌಲ್ಟ್ರಿ ಫಾರಂನಿಂದ ರಾಜ್ಯದ ನಾನಾ ಭಾಗಗಳಿಗೆ ಕೋಳಿ ಸಪ್ಲೈ ಮಾಡಲಾಗುತ್ತಿತ್ತು. ಹೀಗಾಗಿ ಸರ್ಕಾರದ ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೂ ನೋಟಿಸ್ ನೀಡಿದ್ದು, ಕೋಳಿ ಸಾಕಾಣೆ ಶೆಡ್, ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಕೋಳಿ ಸಾಕಾಣೆಗಾರರನ್ನ ಕ್ವಾರಂಟೈನ್ ಮಾಡಿದ್ದಾರೆ.

ಸದ್ಯ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಾಹಿತಿ ಬಂದಿದ್ದು, ರಾಜ್ಯ ಸರ್ಕಾರ ಪಶು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಬಿಸಿಲ ತಾಪದಲ್ಲಿ ಬಂದಿರುವ H5N1 ಹಕ್ಕಿ ಜ್ವರ ಬಂದಿದ್ದು, ಸುತ್ತಮುತ್ತ ಇರುವ ಕೋಳಿ ಶೆಡ್ ತಪಾಸಣೆ ನಡೆಸುವಂತೆ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!