- Advertisement -
- Advertisement -


ಹಳೆಯಂಗಡಿ: ಪಕ್ಷಿಕೆರೆ ರಸ್ತೆಯ ಲೈಟ್ ಹೌಸ್ ನ ಸೆಲೂನ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪಕ್ಷಿಕೆರೆ ಪಂಜ ಕೊಯಿಕುಡೆ ನಿವಾಸಿ, ದಿನೇಶ್ ಬಂಗೇರ (43) ಇಂದಿರಾನಗರದ ರೈಲ್ವೆ ಕ್ರಾಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದಿನೇಶ್ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಆಸೀಫ್ ಆಪದ್ಬಾಂಧವ ನೆರವಾಗಿದ್ದಾರೆ. ಮುಲ್ಕಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


- Advertisement -