Thursday, May 2, 2024
spot_imgspot_img
spot_imgspot_img

ಲೈಂಗಿಕ ಕಿರುಕುಳ ಮತ್ತು ಜಾತಿನಿಂದನೆ ಆರೋಪದ ಮೆರೆಗೆ ಪ್ರಿನ್ಸಿಪಾಲ್​​ ಅರೆಸ್ಟ್

- Advertisement -G L Acharya panikkar
- Advertisement -

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಜಾತಿನಿಂದನೆ ಆರೋಪದ ಮೆರೆಗೆ ಶಿವಮೋಗದ ಖಾಸಗಿ ಕಾಲೇಜ್​​ ಪ್ರಿನ್ಸಿಪಾಲ್​​ರನ್ನು ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫ್ರಾನ್ಸಿಸ್​ ಫರ್ನಾಂಡಿಸ್ ಬಂಧಿತ ಪ್ರಿನ್ಸಿಪಾಲ್. ಇವರು ಚರ್ಚ್ ಫಾದರ್​ ಕೂಡ ಆಗಿದ್ದಾರೆ.​​ ಸದ್ಯ ಫ್ರಾನ್ಸಿಸ್​ ಫರ್ನಾಂಡಿಸ್ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಕೇಸ್​ ದಾಖಲಿಸಲಾಗಿದೆ.

ಸೆಕ್ರೆಡ್ ಹಾರ್ಟ್ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಸುವ ನಾಟಕವಾಡಿದ್ದರು ಎನ್ನಲಾಗಿದೆ. ಎಸ್​ಸಿಎಸ್​ಟಿ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು. ಫರ್ನಾಂಡಿಸ್ ಕಿರುಕುಳದಿಂದ ವಿದ್ಯಾರ್ಥಿನಿ ನಿನ್ನೆ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

- Advertisement -

Related news

error: Content is protected !!