Sunday, June 7, 2026
spot_imgspot_img
spot_imgspot_img

ಮದುವೆಗೆ ಕರೆಯಲು ಹೋದ ಹರ್ಷಿಕಾಗೆ ಸಿಕ್ತು ಹಿರಿಯ ನಟಿಯಿಂದ ಸ್ಪೆಷಲ್‌ ಗಿಫ್ಟ್‌..!!

- Advertisement -
- Advertisement -

ಸ್ಯಾಂಡಲ್‌ವುಡ್‌ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಹಸಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಸ್ಯಾಂಡಲ್‌ವುಡ್‌ ಗಣ್ಯರಿಗೆ ಆಮಂತ್ರಣ ನೀಡುತ್ತಿದ್ದಾರೆ. ಈ ಜೋಡಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ಸ್ಪೆಷಲ್‌ ಗಿಫ್ಟ್‌ ಸಿಕ್ಕಿದೆ.

ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲ ಅವರು ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್ ನೀಡಿದ್ದಾರೆ. ಭುವನ್ – ಹರ್ಷಿಕಾ ವಿವಾಹಕ್ಕೆ ಚಿನ್ನದ ಉಡುಗೊರೆಯನ್ನು ಕೊಟ್ಟು ಸರ್ ಪ್ರೈಸ್ ನೀಡಿದ್ದಾರೆ. ಜೊತೆಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ನಟಿ ಜಯಮಾಲ ಸಂಭ್ರಮಿಸಿದರು.

ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಅದ್ದೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದ್ದು, ಸಾಕಷ್ಟು ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆಯಾಗುತ್ತಿದ್ದು, ಅದಕ್ಕಾಗಿ ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ ಸಿಂಗಾರಗೊಳ್ಳಲಿದೆ.

- Advertisement -

Related news

error: Content is protected !!