Friday, May 17, 2024
spot_imgspot_img
spot_imgspot_img

ಹಾಸನ: ಅರ್ಜುನ ಆನೆ ಸಮಾಧಿ ಮೇಲೆ ಕಾಡಾನೆಗಳ ದಾಂಧಲೆ

- Advertisement -G L Acharya panikkar
- Advertisement -

ಮಾಜಿ ಕ್ಯಾಪ್ಟನ್​​ ಅರ್ಜುನ ಆನೆ ಸಮಾಧಿ ಬಳಿ ಕಾಡಾನೆಗಳು ದಾಂಧಲೆ ಮಾಡಿವೆ. ಸಮಾಧಿ ಸುತ್ತ ಹಾಕಿದ್ದ ತಂತಿಬೇಲಿಯನ್ನು ನಾಶ ಮಾಡಿ ಕಾಡಾನೆಗಳು ಸಮಾಧಿ ಮೇಲೆಲ್ಲಾ ಓಡಾಡಿವೆ. ಡಿಸೆಂಬರ್​​ 4ರಂದು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಾಜಿ ಕ್ಯಾಪ್ಟನ್​ ಅರ್ಜುನ ಆನೆ ಮೃತಪಟ್ಟಿದ್ದನು. ಇಲ್ಲಿಯೇ ಅರ್ಜುನನ್ನು ಸಮಾಧಿ ಮಾಡಲಾಗಿದೆ.

ತಾತ್ಕಾಲಿಕವಾಗಿ ಅರ್ಜುನನ ಸಮಾಧಿ ಸುತ್ತ ತಂತಿಬೇಲಿ ಹಾಕಲಾಗಿತ್ತು. ನಿನ್ನೆ ರಾತ್ರಿ ಕಾಡಾನೆಗಳ ಹಿಂಡು ತಂತಿ ಬೇಲಿಯನ್ನೇ ನೆಲಸಮಗೊಳಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!