Friday, April 26, 2024
spot_imgspot_img
spot_imgspot_img

ವರ್ಷದ ಬಳಿಕ ದರ್ಶನ ನೀಡಿದ ‘ಹಾಸನಾಂಬೆ’

- Advertisement -G L Acharya panikkar
- Advertisement -

ಹಾಸನ: ವರ್ಷದ ಬಳಿಕ ತಾಯಿ ಹಾಸನಾಂಬೆ ದೇವಾಲಯವನ್ನು ಭಕ್ತರ ದರ್ಶನಕ್ಕಾಗಿ ನವೆಂಬರ್ 5 ರಂದು ತೆರೆಯಲಾಯಿತು.

ಈ ಬಾರಿ ಹಾಸನಾಂಬೆ ದರ್ಶನವನ್ನು ಜಿಲ್ಲಾಡಳಿತ ನೇರ ಪ್ರಸಾರ ಮಾಡುವ ಮೂಲಕ ಎಲ್ಲರಿಗೂ ಏಕಕಾಲದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನಲೆ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ನೇರ ಅವಕಾಶದ ಬದಲು ಈ ಬಾರಿ ಎಲ್.ಇ.ಡಿ. ಪರದೆ ಮೂಲಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು . ನಗರದಲ್ಲಿ 10 ಕಡೆ ಈ ಎಲ್​ಇಡಿ ಪರದೆ ಅಳವಡಿಸಲಾಗಿದ್ದು ಇನ್ನು ರಾಜ್ಯದ ಜನರು ಕೂಡ ಜಿಲ್ಲಾಡಳಿತದ  ಪೇಜ್​ನಲ್ಲಿ ಇದರ ನೇರ ಪ್ರಸಾರ ನೋಡಬಹುದು. ಮೊದಲ ದಿನದಿಂದ ಕೊನೆ ದಿನವರೆಗೂ ದೇವಾಲಯದ ಪೂಜೆ ಪುನಸ್ಕಾರಗಳು ವೀಕ್ಷಿಸುವ ಅವಕಾಶ ನೀಡಲಾಗಿದೆ.

ಪ್ರತಿವರ್ಷ ಅಶ್ವಯುಜ ಹುಣ್ಣಿಮೆಯಂದು ಮಾತ್ರ ಬಾಗಿಯುವ ತೆರಯುವ ದೇವಾಲಯ ಬಲಿಪಾಡ್ಯಮಿಯಂದು ಬಾಗಿಲು ಹಾಕಲಾಗುತ್ತದೆ. ಈ ದೇವಾಲಯದ ವಿಶೇಷವೆಂದರೇ  ವರ್ಷದ ಬಳಿಕ ಬಾಗಿಲು ತೆರದಾಗ ದೇವಿ ಮೇಲಿರುವ ಹೂವು ಬಾಡಿರುವುದಿಲ್ಲ. ದೀಪ ಕೂಡ ಉರಿಯುತ್ತಲಿರುತ್ತದೆ. ಇದೇ ಕಾರಣಕ್ಕೆ ಈ ದೇವಿ ಪವಾಡ ದೇವತೆ ಎಂಬ ನಂಬಿಕೆ ಇದೆ. ಇತ್ತೀಚಿನ ದಿನಗಳಲ್ಲಿ  ಹಾಸನಾಂಬೆ ದರ್ಶನ ಹೆಚ್ಚು ಖ್ಯಾತಿ ಗೊಂಡಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

- Advertisement -

Related news

error: Content is protected !!