- Advertisement -
- Advertisement -



ಹಾಸನ: ಥೈವುಡ್ ಫ್ಯಾಕ್ಟರಿಗೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಅದನ್ನು ನಂದಿಸಲು ಬಂದ ಅಗ್ನಿಶಾಮಕದಳದ ವಾಹನಕ್ಕೆ ಬೆಂಕಿ ತಗುಲಿ ಸಿಬ್ಬಂದಿಗಳು ಗಾಯಗೊಂಡ ಘಟನೆ ಹಾಸನದ ಹೊಳೆನರಸೀಪುರ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮಶೇಖರ್, ಚಾಲಕ ಜನಾರ್ದನ್ ಹಾಗೂ ವಿಷ್ಣು ಎಂಬವರಿಗೆ ಗಾಯಗಳಾಗಿವೆ. ಫೈವುಡ್ ಕಾರ್ಖಾನೆಯಾದ್ದರಿಂದ ಅಲ್ಲಿದ್ದ ಮರದ ದಿಮ್ಮಿಗಳು, ಫೈವುಡ್ ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಸ್ಥಳಕ್ಕೆ ಅಗ್ನಿಶಾಮಕದಳದ ವಾಹನ ಹಾಗೂ ಮಿನಿ ವಾಹನದ ಮೂಲಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಈ ವೇಳೆ ಮಿನಿ ವಾಹನಕ್ಕೂ ಬೆಂಕಿ ತಗುಲಿದೆ. ಬಳಿಕ ಮತ್ತೊಂದು ಅಗ್ನಿಶಾಮಕ ವಾಹನ ತರಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹೊಳೆನರಸೀಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -