- Advertisement -
- Advertisement -






ಹಾವೇರಿ: ಬಿರುಗಾಳಿ ಮಳೆಗೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದು, ಭಾರೀ ಬಿರುಗಾಳಿ ಮಳೆಗೆ ರೇಷ್ಮೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋದ ಘಟನೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
4 ಎಕರೆಯಲ್ಲಿ ಬೆಳೆದಿದ್ದ ರೇಷ್ಮೆ ಹುಳುಗಳು ಸಾಕಾಣಿಕೆ ಮಾಡುತ್ತಿದ್ದ ಶೇಖಪ್ಪ ಕಳ್ಳಿಹಾಳ ಎಂಬವರಿಗೆ ಸೇರಿದ ರೇಷ್ಮೆ ಮನೆ ಸಂಪೂರ್ಣ ಹಾನಿಯಾಗಿದ್ದು, 10 ಲಕ್ಷಕ್ಕೂ ಅಧಿಕ ಮೌಲ್ಯದ ರೇಷ್ಮೆ ಹುಳುಗಳು ಮತ್ತು ರೇಷ್ಮೆ ಮನೆ ಸಂಪೂರ್ಣ ನಾಶವಾಗಿದೆ.
ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದ ಅನ್ನದಾತರು ಕಂಗಾಲಾಗಿದ್ದಾರೆ. ತಡರಾತ್ರಿ ತಾಡಪಲ್ ಹಾಕಿ ರೇಷ್ಮೆ ಹುಳುಗಳನ್ನ ರಕ್ಷಣೆ ಮಾಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








