- Advertisement -
- Advertisement -


ರಾಷ್ಟ್ರಮಟ್ಟದ ಈಜು ಚಾಂಪಿಯನ್, ವಿಟ್ಲ ಸರಕಾರಿ ಪಶುವೈದ್ಯ ಹಿರಿಯ ಪರೀಕ್ಷಕರಾದ ಕಾಶಿಮಠ ಈಶ್ವರ ಭಟ್ ಅವರು ಅನಾರೋಗ್ಯದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸ್ಪೀಕರ್ ಯು.ಟಿ.ಖಾದರ್ ಅವರು ಆದಿತ್ಯವಾರ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ವಿಟ್ಲದ ಕಾಶಿಮಠ ಈಶ್ವರ ಭಟ್ ಹಗಲು ರಾತ್ರಿ ಎನ್ನದೇ ಆಪತ್ಬಾಂಧವರಾಗಿ ಕೆಲಸ ಮಾಡುತ್ತಿದ್ದು, ಸರಕಾರದ ಕೆಲಸ ದೇವರ ಕೆಲಸ ಎಂಬ ಮಾತಿಗೆ ಅನ್ವರ್ಥರಾಗಿದ್ದಾರೆ. ನೂರಾರು ಈಜುಪಟುಗಳನ್ನು ತಯಾರಿಸಿದ್ದರಲ್ಲದೇ ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಚಿನ್ನದ ಪದಕವನ್ನು ಮೂರು ಭಾರಿ ಪಡೆದ ಹೆಗ್ಗಳಿಕೆ ಅವರದ್ದು. ಸ್ಪೀಕರ್ ಖಾದರ್ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
- Advertisement -