Friday, May 3, 2024
spot_imgspot_img
spot_imgspot_img

ಅಮೃತ ಬಳ್ಳಿ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -
This image has an empty alt attribute; its file name is balavikas-866x1024.jpg

ಅಮೃತ ಬಳ್ಳಿ ಆಯುರ್ವೇದದಲ್ಲಿ ದಿವ್ಯೌಷಧವಾಗಿದ್ದು, ಕೇವಲ ಮಧುಮೇಹಕ್ಕೆ ಮಾತ್ರ ಚಿಕಿತ್ಸೆ ನೀಡುವುದಿಲ್ಲ, ಬದಲಾಗಿ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಅಮೃತ ಬಳ್ಳಿಯ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಇದೊಂದು ಆಯುರ್ವೇದದ ಅದ್ಭುತವಾದ ಗಿಡಮೂಲಿಕೆಯಾಗಿದೆ. ಸಾಂಕ್ರಾಮಿಕ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಅಮೃತ ಬಳ್ಳಿಯು ಮಾನವನಿಗೆ ದೇವರು ನೀಡಿರುವ ಅಮೃತವಾಗಿದ್ದು, ಹಲವಾರು ರೋಗಗಳು ಬಾರದಂತೆ ನಿಯಂತ್ರಿಸುತ್ತದೆ. ಒಟ್ಟಾರೆ ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಕೋಶಗಳನ್ನು ಆರೋಗ್ಯಕರವಾಗಿರಿಸಿ ರೋಗಗಳನ್ನು ತೊಡೆದು ಹಾಕುತ್ತದೆ. ಇದು ರಕ್ತವನ್ನು ಶುದ್ಧೀಕರಿಸಿ, ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

ಅಮೃತ ಬಳ್ಳಿಯು ಅಪಾಯಕಾರಿ ಜ್ವರಗಳಾದ ಡೆಂಗ್ಯೂ, ಹಂದಿ ಜ್ವರ, ಮಲೇರಿಯಾದಂತಹ ಹಲವಾರು ಮಾರಣಾಂತಿಕ ಪರಿಸ್ಥಿತಿಗಳ ಚಿಹ್ನೆ ಮತ್ತು ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಮೃತ ಬಳ್ಳಿಯು ಮಧುಮೇಹಕ್ಕೆ ಅತ್ಯುತ್ತಮವಾಗಿ ಚಿಕಿತ್ಸೆ ನೀಡುತ್ತದೆ. ಇದರಲ್ಲಿರುವ ಗುಣಗಳು ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಹೊಂದಿರುವವರು ಆಗಾಗ್ಗೆ ಅಮೃತ ಬಳ್ಳಿಯನ್ನು ಸೇವನೆ ಮಾಡುವುದು ಅಥವಾ ಜ್ಯೂಸ್‌ ಆಗಿ ಸೇವನೆ ಮಾಡುವುದು ಒಳ್ಳೆಯದು.

ವಾಸ್ತವವಾಗಿ, ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುವ ದೀರ್ಘಾವಧಿಯ ಸೆಲ್ಯುಲಾರ್‌ ಇನ್ಸುಲಿನ್‌ ಸೂಕ್ಷ್ಮತೆಯನ್ನು ಅಮೃತ ಬಳ್ಳಿಯಲ್ಲಿರುವ ಅಂಶಗಳು ಸುಧಾರಿಸುತ್ತದೆ. ಅಮೃತ ಬಳ್ಳಿಯು ಉರಿಯೂತದ ಪ್ರಯೋಜನಗಳಿಗೆ ಜನಪ್ರಿಯವಾಗಿದೆ. ಆಗಾಗ್ಗೆ ಕೆಮ್ಮು, ಶೀತ, ಉಸಿರಾಟದ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಇದು ಉರಿಯೂತ ಮತ್ತು ಸಂಧಿವಾತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಸಂಧಿವಾತದಂತಹ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

- Advertisement -

Related news

error: Content is protected !!