Saturday, June 20, 2026
spot_imgspot_img
spot_imgspot_img

ಕೊರೊನಾ ಗೆದ್ದ ಗಾನ ಗಂಧರ್ವ ಎಸ್​​ ಪಿ ಬಾಲಸುಬ್ರಹ್ಮಣ್ಯಂ !

- Advertisement -
- Advertisement -

ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಕೊರೋನಾ ಗೆದ್ದು ಬಂದಿದ್ದು, ಎಸ್​​​ಪಿಬಿಗೆ ಕೊರೋನಾ ನೆಗೆಟಿವ್ ಬಂದಿರುವ ಬಗ್ಗೆ ಅವ್ರ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಸ್ ಪಿ ಬಿ ಅವರಿಗೆ ಕಳೆದ ಕೆಲವು ದಿನಗಳಿಂದ ವಿದೇಶಿ ವೈದ್ಯರಿಂದ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.

ಪ್ರತಿ ದಿನ ತಂದೆಯ ಹೆಲ್ತ್ ಬುಲೆಟಿನ್ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದ ಎಸ್​ಪಿಬಿ ರವರ ಪುತ್ರ ಚರಣ್ ಕಳೆದ ಒಂದು ವಾರದಿಂದ ಯಾವುದೇ ಮಾಹಿತಿ ನೀಡಿರಲಿಲ್ಲ. ಎಸ್​ಪಿಬಿ ಹೆಲ್ತ್ ಬುಲೆಟಿನ್ ಬಗ್ಗೆ ನಿನ್ನೆ ವಿಡಿಯೋ ಮಾಡಿ ಒಂದು ವಾರದದಿಂದ ತಂದೆಯ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದಕ್ಕೆ ಕ್ಷಮೆ ಯಾಚಿಸಿ, ಈ ಕ್ರಮವಾಗಿ ಅವರಿಗೆ ಹೊಸದಾಗಿ ನಡೆಸಲಾದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಆದರೆ ತಂದೆಯವರ ಶ್ವಾಸಕೋಶದಲ್ಲಿ ಇನ್ನೂ ಸ್ವಲ್ಪ ಸೋಂಕಿದ್ದು,   ಇನ್ನೊಂದು ವಾರದಲ್ಲಿ ಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!