Sunday, May 5, 2024
spot_imgspot_img
spot_imgspot_img

ಗರಿಕೆ ಹುಲ್ಲಿನ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ನಿಮ್ಮರೋಗಗಳಿಗೆ ಮನೆಯ ಮುಂದಿರುವ ಗರಿಕೆಯೇ ಅದ್ಭುತ ಔಷಧಿ! ಗರಿಕೆ ಹುಲ್ಲನ್ನು ಬರಿ ದೇವರಿಗೆ, ಪೂಜೆಗೆ ಮಾತ್ರ ಅರ್ಪಣೆ ಮಾಡುವುದಲ್ಲ ಅದರಿಂದ ಆರೋಗ್ಯಕ್ಕೂ ಸಾಕಷ್ಟು ಉಪಯೋಗಗಳಿವೆ.
ಇದು ಮಧುಮೇಹ ಹೊಂದಿರುವವರಿಗೆ ಅದ್ಭುತ ಆರೈಕೆ ಮಾಡುವುದು. ಮಧುಮೇಹ ರೋಗಿಗಳಲ್ಲಿ ಇರುವ ಹೈಪೋಗ್ಲಿಸಿಮಿಕ್ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅವರಲ್ಲಿ ಇರುವ ಇತರ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ.

ಗರಿಕೆ ಹುಲ್ಲಿನಲ್ಲಿ ಸಿಡಿಪಿಎಫ್(ಸಿನೊಡಾನ್ ಡ್ಯಾಕ್ಟಿಲಾನ್ ಪ್ರೋಟೀನ್) ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು. ಇಮ್ಯೂನೊಮೊಡ್ಯುಲೇಟರಿ ಚಟುವಟಿಕೆಯನ್ನು ತೀವ್ರಗೊಳಿಸುವುದು. ಆಗ ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಜೊತೆಗೆ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಹಾಗಾಗಿ ವಾರದಲ್ಲೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ಕಷಾಯ ಅಥವಾ ರಸವನ್ನು ಸೇವಿಸುವುದು ಉತ್ತಮ.

ಮಹಿಳೆಯರು ಪುರುಷರಿಗಿಂತ ಸೂಕ್ಷ್ಮ ಆರೋಗ್ಯವನ್ನು ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆ, ಮೂತ್ರದಲ್ಲಿ ಸೋಂಕು, ದುರ್ವಾಸನೆಯಿಂದ ಕೂಡಿದ ಬಿಳಿಸ್ರಾವಗಳು ಪದೇ ಪದೇ ಕಾಡುವ ಸಾಧ್ಯತೆಗಳು ಹೆಚ್ಚು. ಇಂತಹ ಸಮಸ್ಯೆ ಇರುವ ಮಹಿಳೆಯರು ಗರಿಕೆ ಹುಲ್ಲಿನ ರಸವನ್ನು ಮೊಸರಿನಲ್ಲಿ ಮಿಶ್ರಮಾಡಿ ಸೇವಿಸಬೇಕು. ಗಣನೀಯವಾಗಿ ಈ ವಿಧಾನವನ್ನು ಅನುಸರಿಸಿದರೆ ಬಿಳಿಸ್ರಾವ, ಮೂತ್ರದ ಸೋಂಕು, ಗರ್ಭಕೋಶದ ಸಮಸ್ಯೆಗಳಾದ ಪಿಸಿಓಡಿ (ಪಾಲಿಸಿಸ್ಟಿಕ್ ಓವೆರೆಸಿ) ಸಮಸ್ಯೆಗಳು ನೈಸರ್ಗಿಕವಾಗಿಯೇ ಪರಿಹಾರ ಕಂಡುಕೊಳ್ಳುತ್ತವೆ. ಪ್ರೊಲ್ಯಾಕ್ಟಿನ್ ಹಾರ್ಮೋನ್‍ಗಳ ಉತ್ಪಾದನೆಗೆ ಹೆಚ್ಚಿನ ಪ್ರಚೋದನೆ ನೀಡುವುದರಿಂದ ಬಾಣಂತಿಯರು ಇದನ್ನು ಸೇವಿಸಿದರೆ ಹಾಲಿನ ಪ್ರಮಾಣವನ್ನು
ಹೆಚ್ಚಿಸಿಕೊಳ್ಳಬಹುದು
.

ಅನುಚಿತ ಆಹಾರ ಸೇವನೆ, ಪೋಷಕಾಂಶಗಳ ಕೊರತೆ, ನಾರಿನಂಶದ ಕೊರತೆ, ಜಂಕ್ ಆಹಾರಗಳು ಸೇರಿದಂತೆ ಅನೇಕ ಕಾರಣಗಳಿಂದ ಬಹುತೇಕ ಜನರು ಜೀರ್ಣಕ್ರಿಯೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. ನಿತ್ಯವೂ ಗರಿಕೆ ಹುಲ್ಲಿನ ರಸ ಅಥವಾ ಇತರ ಆಹಾರ ಪದಾರ್ಥಗಳಲ್ಲಿ ಗರಿಕೆಯ ರಸವನ್ನು ಮಿಶ್ರಗೊಳಿಸಿ ಸೇವಿಸಬೇಕು. ಹೀಗೆ ಮಾಡುವುದರಿಂದ ಜೀರ್ಣ ಕ್ರಿಯೆ ಮತ್ತು ಕರುಳಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

ಪದೇ ಪದೇ ಶೀತ ಹಾಗೂ ಕಫದಂತಹ ಸಮಸ್ಯೆ ಹೊಂದಿದವರು ಸಹ ಗರಿಕೆಯನ್ನು ಗಣನೀಯವಾಗಿ ಸೇವಿಸಬೇಕು. ಆಗ ಶೀತ ಮತ್ತು ಕಫದ ಸಮಸ್ಯೆಯು ಬಹುಬೇಗ ಕಡಿಮೆಯಾಗುವುದು. ಯಾರು ಬಾಯಿಯ ದುರ್ವಾಸನೆ, ಒಸಡಿನಲ್ಲಿ ರಕ್ತಸ್ರಾವದಂತಹ ಸಮಸ್ಯೆ ಹೊಂದಿರುತ್ತಾರೆ. ಅವರು ಗರಿಕೆಯ ರಸವನ್ನು ಸೇವಿಸಬಹುದು.

ಧೂಳು, ಆನುವಂಶಿಕತೆ ಹಾಗೂ ಪೋಷಕಾಂಶಗಳ ಕೊರತೆಯಿಂದ ತ್ವಚೆಯು ಶುಷ್ಕತೆ, ತುರಿಕೆ, ಉರಿಯೂತ, ನಂಜುಗಳಂತಹ ಸಮಸ್ಯೆಗಳಿಗೆ ಗರಿಕೆಯ ರಸ ರಾಮಬಾಣವಾಗುವುದು.ಗರಿಕೆಯ ಹುಲ್ಲು ನೈಸರ್ಗಿಕವಾಗಿಯೇ ರಕ್ತ ಶುದ್ಧೀಕಾರಕವಾಗಿ ಕಾರ್ಯನಿರ್ವಹಿಸುವುದು. ರಕ್ತಕಣಗಳು ಆರೋಗ್ಯಕರವಾಗಿರುವಂತೆ ಕಾಪಾಡುವುದು. ಗಾಯ ಮತ್ತು ಅತಿಯಾದ ಮುಟ್ಟಿನ ಸ್ರಾವವನ್ನು ಕಡಿಮೆ ಮಾಡಲು ಗರಿಕೆಯ ಮೊರೆ ಹೋಗಬಹುದು.

- Advertisement -

Related news

error: Content is protected !!