


ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವು ದರಿಂದ ಹೃದಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಈ ವಿಧಾನದಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಸಹಾ ಆರೋಗ್ಯಕರ ಮಟ್ಟದಲ್ಲಿರಿಸುತ್ತದೆ.
ಸಾಮಾನ್ಯವಾಗಿ ಒಣದ್ರಾಕ್ಷಿ ಎಂದರೆ ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸಲ್ಪಡುವ ಒಣಫಲವೆಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ. ವಾಸ್ತವದಲ್ಲಿ ಒಣದ್ರಾಕ್ಷಿಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಹೆಚ್ಚುವರಿ ಆಹಾರದ ರೂಪದಲ್ಲಿ ಅಳವಡಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ಅಷ್ಟಕ್ಕೂ, ಒಣದ್ರಾಕ್ಷಿಯನ್ನು ಹಾಗೇ ಸೇವಿಸಿದರೆ ಸಾಕಲ್ಲವೇ? ನೆನೆಸಿಟ್ಟು ಇದರ ನೀರು ಕುಡಿದರೆ ಅದು ಹೇಗೆ ಭಿನ್ನವಾದ ಪ್ರಯೋಜನ ನೀಡುತ್ತದೆ? ಈ ಪ್ರಶ್ನೆಗೆ ಉತ್ತರವೆಂದರೆ ನೆನೆಸಿಟ್ಟ ನೀರಿಗೆ ಬಿಡುಗಡೆಯಾಗುವ ರಾಸಾಯನಿಕಗಳು ಯಕೃತ್ ನಲ್ಲಿ ನಡೆಯುವ ಹಲವಾರು ರಾಸಾಯನಿಕ ಕ್ರಿಯೆಗಳಿಗೆ ಪ್ರಚೋದನೆ ನೀಡುತ್ತದೆ ಹಾಗೂ ರಕ್ತಶುದ್ದೀಕರಣ ಫಲಪ್ರದವಾಗುತ್ತದೆ.
ದ್ರಾಕ್ಶಿಯನ್ನು ಒಣದಾಗಿಯೇ ಅಥವಾ ಹಸಿಯಾಗಿ ತಿನ್ನುವುದಕ್ಕಿಂತಲೂ ಭಿನ್ನವಾದ ಪ್ರಯೋಜನಗಳನ್ನು ಈ ನೆನೆಸಿಟ್ಟ ನೀರು ಒದಗಿಸುತ್ತದೆ. ಸತತ ಕೆಲವಾರು ದಿನಗಳವರೆಗೆ ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗಿ ಹಸಿವು ಹೆಚ್ಚುತ್ತದೆ ಹಾಗೂ ದೇಹಕ್ಕೆ ಹೆಚ್ಚು ಹೆಚ್ಚಿನ ಶಕ್ತಿ ದೊರಕುತ್ತದೆ.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವು ದರಿಂದ ಹೃದಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಈ ವಿಧಾನದಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಸಹಾ ಆರೋಗ್ಯಕರ ಮಟ್ಟದಲ್ಲಿರಿಸುತ್ತದೆ. ವಾಸ್ತವದಲ್ಲಿ ಒಣದ್ರಾಕ್ಷಿಯನ್ನು ಹಾಗೇ ಸೇವಿಸುದುದಕ್ಕಿಂತಲೂ ನೆನೆಸಿಟ್ಟ ನೀರಿನ ಸೇವನೆಯಿಂದ ದೇಹಕ್ಕೆ ಲಭಿಸುವ ಸಕ್ಕರೆಯ ಶೇಖಡಾವಾರು ಪ್ರಮಾಣ ಕಡಿಮೆಯಾಗಿ ಉಳಿದ ಪೋಷಕಾಂಶಗಳು ಹೆಚ್ಚಾಗಿ ದೊರಕುವುದೇ ಈ ನೀರಿನ ಮಹತ್ವವಾಗಿದೆ.
ಒಣದ್ರಾಕ್ಷಿ ಪ್ರಕೃತಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಮೂಲತಃ ದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಇದರಲ್ಲಿರುವ ಬಯೋಫ್ಲೇವನಾಯ್ಡುಗಳು ಹೆಚ್ಚು ಸಾಂದ್ರಗೊಳ್ಳುತ್ತವೆ. ಈ ಸಾಂದ್ರತೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ.
ಮೂತ್ರಪಿಂಡ ಮತ್ತು ಪಿತ್ತಜನಕಾಂಗಗಳು ನಮ್ಮ ದೇಹವನ್ನು ಶೋಧಿಸುವ ಕೆಲಸ ನಿರ್ವಹಿಸುವ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಒಂದಾಗಿದೆ, ಇವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿರುವ ಎಲ್ಲಾ ಭಾರದ ಲೋಹಗಳು ಮತ್ತು ಜೀವಾಣುಗಳನ್ನು ನಿವಾರಿಸುತ್ತವೆ. ಆದರೆ ಕೆಲವು ಕೆಟ್ಟ ಆಹಾರ ಪದ್ಧತಿ ಮತ್ತು ಕೊಬ್ಬಿನ ಆಹಾರ ಸೇವನೆಯಿಂದಾಗಿ ಕೆಲವೊಮ್ಮೆ ಈ ಕಾರ್ಯ ಪರಿಪೂರ್ಣವಾಗಿ ಸಾಗದಾಗುತ್ತದೆ. ಒಣದ್ರಾಕ್ಷಿ ಒಣದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯ ಈ ಸಮಸ್ಯೆಗಳು ಬಹಳ ಪರಿಣಾಮಕಾರಿಯಾಗಿ ಪರಿಹರಿಸಲ್ಪಡುತ್ತವೆ.
ಒಣದ್ರಾಕ್ಷಿ ಒಣದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ರಕ್ತ ಶುದ್ದೀಕರಣಗೊಳ್ಳುವ ಜೊತೆಗೇ ಯಕೃತ್ ನ ಕಾರ್ಯಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ.ಒಣದ್ರಾಕ್ಷಿ ಒಣದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ವಿಶೇಷವಾಗಿ ಯಕೃತ್ ನಲ್ಲಿ ಕೆಲವು ರಾಸಾಯನಿಕ ಕ್ರಿಯೆಗಳು ಜರುತ್ತವೆ ಹಾಗೂ ರಕ್ತಪರಿಶೀಧನೆಯನ್ನು ಇನ್ನಷ್ಟು ಸಕ್ಷಮವಾಗಿ ನಿರ್ವಹಿಸಲು ಪ್ರಚೋದನೆ ನೀಡುತ್ತದೆ. ರಕ್ತಪರಿಚಲನೆಯ ಶುದ್ಧೀಕರಣದ ಹೊರತಾಗಿ, ಒಣದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ








