Friday, May 3, 2024
spot_imgspot_img
spot_imgspot_img

ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ಆರೋಗ್ಯದ ವಿಚಾರದಲ್ಲಿ ನುಗ್ಗೆ ಕಾಯಿಯ ಮಹತ್ವ ನಿಮಗೆ ಗೊತ್ತಿರಬಹುದು. ಆದರೆ, ನಿಮಗೆ ತಿಳಿದಿರಲಿ, ನುಗ್ಗೆ ಕಾಯಿ ಅಷ್ಟೇ ಅಲ್ಲ. ನುಗ್ಗೆ ಸೊಪ್ಪು ಕೂಡಾ ಆರೋಗ್ಯ ವಿಚಾರದಲ್ಲಿ ಸಂಜೀವಿನಿ.ಮಧುಮೇಹ ಇದ್ದಾಗ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆ ಆಗುತ್ತದೆ. ಆದರೆ, ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಡಿ ಅಂಶ ಹೇರಳವಾಗಿರುತ್ತದೆ. ಇದು, ಮನುಷ್ಯನ ದೇಹದಲ್ಲಿ ಹೇರಳವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.

ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಇರಬೇಕು. ಆದರೆ ಕೆಟ್ಟ ಕೊಲೆಸ್ಟ್ರಾಲ್ ಇರಬಾರದು. ನಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದಾಗ ಹೃದಯದ ಕೋಶಗಳಿಗೆ ಹಾನಿಯಾಗುತ್ತದೆ. ಇದು ಮುಂದೆ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಎಂದೇ ಗುರುತಿಸಲಾಗಿರುವ ಎಲ್ ಡಿಎಲ್ ವಿರುದ್ಧ ನುಗ್ಗೆ ಸೊಪ್ಪು ಹೋರಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಒಮೆಗಾ-3 ಫ್ಯಾಟಿ ಆಮ್ಲ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ದೇಹದಿಂದ ಹೀರಿಕೊಳ್ಳುತ್ತದೆ. ಇದರಿಂದ ರಕ್ತನಾಳ ಬ್ಲಾಕ್ ಆಗುವುದಿಲ್ಲ. ರಕ್ತ ಸರಾಗವಾಗಿ ಹರಿಯುತ್ತದೆ. ನುಗ್ಗೆ ಸೊಪ್ಪಿನ ಸಾರು ತಿಂದರೆ ಕೆಟ್ಟ ಕೊಲೆಸ್ಟ್ರಾಲ್ನಿಂದ ಹೃದಯವನ್ನು ರಕ್ಷಿಸಿಕೊಳ್ಳಬಹುದು.

ಹೆಚ್ಚು ಕಬ್ಬಿಣದ ಅಂಶ ಇದೆ. ಹಾಗಾಗಿ ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ರಕ್ತ ಶುದ್ಧವಾಗುತ್ತದೆ.

ಅಧಿಕ ಕ್ಯಾಲ್ಸಿಯಂ ನುಗ್ಗೆ ಸೊಪ್ಪಿನಲ್ಲಿದೆ. ನುಗ್ಗೆ ಸೊಪ್ಪು ನಿಮ್ಮ ಮೂಳೆಯನ್ನು ಸ್ಟ್ರಾಂಗ್ ಆಗಿಡುತ್ತದೆ. ಒಂದು ಲೋಟ ಹಾಲಿಗೆ 1 ರಿಂದ 9 ಚಮಚ ನುಗ್ಗೆ ಸೊಪ್ಪಿನ ರಸ ಸೇರಿಸಿ ಕುಡಿಯಿರಿ. ನಿಮ್ಮ ಮೂಳೆಯೂ ಸ್ಟ್ರಾಂಗ್ ಆಗುತ್ತದೆ.

ನಿಮಗೆ ಗೊತ್ತು. ಕ್ಯಾನ್ಸರ್ ಕೋಶಗಳನ್ನು ಶಾಶ್ವತವಾಗಿ ತೆಗೆಯಲು ಸಾಧ್ಯವಿಲ್ಲ. ಆದರೆ, ಈ ತಾಕತ್ತು ನುಗ್ಗೆ ಸೊಪ್ಪಿಗಿದೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಪ್ರೀ ರಾಡಿಕಲ್ಸ್ ಗಳ ವಿರುದ್ಧ ಮೂಲದಲ್ಲೇ ಹೋರಾಟಕ್ಕೆ ಇಳಿಯುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. ಕ್ಯಾನ್ಸರ್ ವಿರುದ್ಧ ಒಂದು ರಕ್ಷಾ ಕವಚ ಸೃಷ್ಟಿಸುತ್ತದೆ.

ನುಗ್ಗೆ ಸೊಪ್ಪು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ನುಗ್ಗೆ ಸೊಪ್ಪಿನಲ್ಲಿ ಪೈಥೋಕೆಮಿಕಲ್ ಅಂಶ ಇದೆ. ಇದು ರಕ್ತದೊತ್ತಡ ನಿವಾರಿಸುತ್ತದೆ.

- Advertisement -

Related news

error: Content is protected !!