Tuesday, April 30, 2024
spot_imgspot_img
spot_imgspot_img

ಬಟರ್ ಫ್ರೂಟ್​ ಹಣ್ಣಿನಲ್ಲಿದೆ ಹಲವು ರೀತಿಯ ಆರೋಗ್ಯಕಾರಿ ಪ್ರಯೋಜನಗಳು

- Advertisement -G L Acharya panikkar
- Advertisement -

ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್​ ಫ್ರೂಟ್​ನ್ನು ಬೆಳೆಯಲಾಗುತ್ತದೆ.

ಬಟರ್ ಫ್ರೂಟ್​ನಲ್ಲಿ ವಿಟಮಿನ್ ಎ, ಬಿ ಮತ್ತು ಇ ಅಂಶಗಳು ಧಾರಾಳವಾಗಿರುತ್ತದೆ. ಇದರೊಂದಿಗೆ ಆರೋಗ್ಯಕ್ಕೆ ಅನುಕೂಲಕರವಾಗಿರುವ ಪ್ರೋಟೀನ್, ಫೈಬರ್​ ಮತ್ತು ಖನಿಜಾಂಶಗಳು ಇದರಲ್ಲಿದೆ. ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಹಾಗೆಯೇ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನಲ್ಲಿ ಕಂಡು ಬರುವ ಫಾಲಿಕ್ ಆ್ಯಸಿಡ್ ಆರೋಗ್ಯವನ್ನು ಹೆಚ್ಚಿಸುತ್ತದೆ.

ಅವಕಾಡೊದಿಂದ ತೈಲವನ್ನು ಕೂಡ ತಯಾರಿಸಲಾಗುತ್ತದೆ. ಚರ್ಮವನ್ನು ಮೃದುಗೊಳಿಸುವಲ್ಲಿ ಈ ತೈಲ ಸಹಕಾರಿ. ವಾರದಲ್ಲಿ ಎರಡು ಬಾರಿ ಅವಕಾಡೊ ತೈಲದಿಂದ ಮಸಾಜ್ ಮಾಡುವುದರಿಂದ ತ್ವಚೆಯು ಸಮಸ್ಯೆಗಳು ದೂರವಾಗುತ್ತದೆ

ಬ್ರಟರ್ ಫ್ರೂಟ್ ಸೇವನೆಯಿಂದ ದೇಹ ತೂಕ ಕಡಿಮೆಯಾಗುತ್ತದೆ. ಇದರಲ್ಲಿರುವ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿನಾಂಶ ದೇಹಕ್ಕೆ ಶಕ್ತಿ ನೀಡುತ್ತದೆ. ಅಲ್ಲದೆ ಸ್ನಾಯುಗಳನ್ನು ಬಲಪಡಿಸುವಲ್ಲಿಯು ಅವಕಾಡೊ ಹಣ್ಣು ಪ್ರಯೋಜನಕಾರಿ.

ಅವಕಾಡೊ ಹಣ್ಣು ಗರ್ಭಿಣಿ ಸ್ತ್ರೀಯರಿಗೂ ಕೂಡ ತುಂಬಾ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ಪೊಲಾಟ್ ಅಂಶಗಳು ಹೇರಳವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಬಟರ್ ಫ್ರೂಟ್​ನ್ನು ಸೇವಿಸಲು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಗರ್ಭಿಣಿಯರು ಈ ಹಣ್ಣನ್ನು ತಿನ್ನುವುದರಿಂದ ಶಿಶುಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ.

- Advertisement -

Related news

error: Content is protected !!