Sunday, April 28, 2024
spot_imgspot_img
spot_imgspot_img

ಸಿಹಿಗೆಣಸಿನ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ಸಿಹಿಗೆಣಸು ಜೀವಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ.
ಸಿಹಿಗೆಣಸು ತನ್ನದೇ ಆದ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಆಹಾರದಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಆಲೂಗಡ್ಡೆ, ಕ್ಯಾರೆಟ್ ಮುಂತಾದ ಬೇರು ಗಡ್ಡೆಗಳೊಂದಿಗೆ ಹೆಚ್ಚು ಸಾಮಾನ್ಯವಾಗಿದೆ. ಇದನ್ನು ಸಿಹಿ ಆಲೂಗಡ್ಡೆ ಎಂತಲೂ ಕರೆಯಲಾಗುತ್ತದೆ. ಏಕೆಂದರೆ ಇದನ್ನು ಬಿಸಿ ಮಾಡುವಾಗ ಅಥವಾ ಬೇಯಿಸುವಾಗ, ಪಿಷ್ಟದ ಅಂಶವನ್ನು ನೈಸರ್ಗಿಕ ಮಾಲ್ಟೋಸ್ ಎಂದು ಇದು ವಿಭಜಿಸುತ್ತದೆ. ಸಿಹಿಗೆಣಸನ್ನು ಜಪಾನಲ್ಲಿ ಹೆಚ್ಚಿನ ಜೀವಿತಾವಧಿಗೆ ಬಳಸಲಾಗುತ್ತದೆ.ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ.

ಇದರ ಜೊತೆಗೆ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲ ಇದಾಗಿದೆ.ಇದನ್ನು ಸೇವಿಸುವುದರಿಂದ ದೇಹವು ಕಾರ್ಯನಿರ್ವಹಿಸಲು ಮತ್ತು ಶಕ್ತಿಯನ್ನು ಉತ್ಪಾದನೆ ಮಾಡಲು ಇದು ಸಹಾಯ ಮಾಡುತ್ತದೆ. ಇದು ಹೊಂದಿರುವ ಬಣ್ಣವು ಬೀಟಾ ಕೆರೋಟಿನ್ ಎಂಬ ಸಂಯುಕ್ತದಿಂದ ಬಂದಿದೆ. ಇದು ಉತ್ತಮವಾದ ಆಂಟಿಆಕ್ಸಿಡೆಂಟ್ ಆಗಿದ್ದು, ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.

ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಇದರ ಜೊತೆಗೆ ವಯಸ್ಸಾದ ವಿರೋಧಿ ಗುಣಗಳನ್ನು ಇದು ತಡೆಯುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದ್ದು, ಕೇವಲ ಒಂದು ಕಪ್ ನಿಮ್ಮ ದೈನಂದಿನ ಅಗತ್ಯಗಳನ್ನು ಅರ್ಧದಷ್ಟು ಇದು ಪೂರೈಸುತ್ತದೆ. ಮ್ಯಾಂಗನೀಸ್, ಪೊಟಾಷಿಯಂ ಮತ್ತು ವಿಟಮಿನ್ ಬಿ ಯ ಉತ್ತಮ ಪೋಷಕಾಂಶಗಳು ಇದರಲ್ಲಿದೆ.

ಸಿಹಿ ಗೆಣಸಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದ್ದು, ಇದು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಆಲೂಗೆಡ್ಡೆಗೆ ಹೋಲಿಸಿದರೆ ಅದಕ್ಕಿಂತ ಹೆಚ್ಚಿನ ಉತ್ತಮ ಗುಣಗಳು ಸಿಹಿ ಗೆಣಸಿಗಿದೆ. ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಕೆಲವೊಂದು ಬಾರಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಮಲಬದ್ಧತೆ, ಸೇವಿಸಿದ ಆಹಾರ ಜೀರ್ಣವಾಗದೆ ಇರುವುದು, ವಾಂತಿ, ಭೇದಿ ಮುಂತಾದ ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಸಿಹಿಗೆಣಸಿನಲ್ಲಿರುವ ಉತ್ತಮವಾದ ಫೈಬರ್ ಅಂಶ. ನಮ್ಮ ಜೀರ್ಣಾಂಗ ಕ್ರಿಯೆ ಉತ್ತಮಗೊಳಿಸಿ, ಮಲಬದ್ಧತೆಯ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

- Advertisement -

Related news

error: Content is protected !!