Friday, June 19, 2026
spot_imgspot_img
spot_imgspot_img

ಕಂಬಳಿಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ..!

- Advertisement -
- Advertisement -
vtv vitla

ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪುಳ ಎಂಬಲ್ಲಿ ಹಾಸಿಗೆ ಅಡಿಯಲ್ಲಿ ಕಂಬಳಿಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಕೊಲೆಯಾದ ಮಹಿಳೆ ಸ್ಥಳೀಯ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿ ಪಿ.ಜೆ.ವಲ್ಸಮ್ಮ ಅಲಿಯಾಸ್ ಅನುಮೋಲ್ 27 ಎಂದು ಗುರುತ್ತಿ ಸಲಾಗಿದೆ. ಕೊಲೆ ಪ್ರಕರಣದ ಆರೋಪಿ ಎಂದು ಶಂಕಿಸಲಾಗಿರುವ ಆಕೆಯ ಪತಿ ವಿಜೇಶ್ ಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಶವವು ಐದು ದಿನಗಳಷ್ಟು ಹಳೆಯದು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನುಮೋಲ್ ಅವರ ಶವ ಕಾಂಚಿಯಾರ್ನಲ್ಲಿರುವ ಅವರ ಮನೆಯಲ್ಲಿ ಕಂಬಳಿಯಲ್ಲಿ ಸುತ್ತಿದ ಸ್ಥಿ ತಿಯಲ್ಲಿ ಪತ್ತೆಯಾಗಿದೆ. ಅನುಮೋಲ್ ಅವರ ಪತಿ ವಿಜೇಶ್ ಭಾನುವಾರ ಕಟ್ಟಪ್ಪನ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಆದ್ರೆ ಅನುಮೋಲ್ ಅವರನ್ನು ಆಕೆಯ ಪತಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು ನಾಪತ್ತೆಯಾದ ಆತನ ಬಗ್ಗೆ ಶೋಧ ಆರಂಭಿಸಿದ್ದಾರೆ.

- Advertisement -

Related news

error: Content is protected !!