- Advertisement -
- Advertisement -
ಕಾಸರಗೋಡು: ಸಿಡಿಲು ಬಡಿದು ಅಪಾರ ಹಾನಿಯುಂಟಾದ ಘಟನೆ ಬಾಯಾರು ಸಮೀಪದ ಧರ್ಮಡ್ಕ ಎಂಬಲ್ಲಿ ಸಂಭವಿಸಿದೆ.
ಸಿಡಿಲು ಬಡಿದು ಧರ್ಮಡ್ಕದ ರಬ್ಬರ್ ಕೃಷಿಕ ರೋಯಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ. ಮೈನ್ ಸ್ವಿಚ್ ಸಹಿತ ವಯರಿಂಗ್ ಪೂರ್ತಿ ಚೆಲ್ಲಾಪಿಲ್ಲಿಯಾಗಿದೆ.
ರೋಯಿ, ಅವರ ಪತ್ನಿ, ಪುತ್ರಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಎರಡು ರಬ್ಬರ್ ಹಾಳೆ ಮಾಡುವ ಯಂತ್ರದ ಮೋಟಾರು, ಎರಡು ನೀರಿನ ಮೋಟಾರ್, ಪ್ರಿಜ್, ಟಿ.ವಿ. ಸಹಿತ ವಿದ್ಯುತ್ ಉಪಕರಣಗಳು ಹಾನಿಗೀಡಾಗಿದ್ದು, ಸುಮಾರು 25 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
- Advertisement -