- Advertisement -
- Advertisement -
ವಿಟ್ಲ: ವಿಟ್ಲದ ಕೊಳ್ನಾಡು ಗ್ರಾಮದ ರಾಜ್ಯ ಹೆದ್ದಾರಿ 101 ಹಾದು ಹೋಗುವ ಕರೈ ಎಂಬಲ್ಲಿ ಇಂದು ಮುಂಜಾನೆ ಬೀಸಿದ ಬಾರೀ ಗಾಳಿ ಮಳೆಗೆ ಹಲವಾರು ಮರಗಳು ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು,ಹಲವು ಕಂಬಗಳು ಹಾಗೂ ಮರಗಳು ರಾಜ್ಯ ಹೆದ್ದಾರಿಗೆ ಉರುಳಿದ ಪರಿಣಾಮ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕಾಗಿದೆ.



ಕೂಡಲೇ ಕಾರ್ಯಪ್ರವೃತ್ತರಾದ ಊರಿನ ನಾಗರಿಕರು,ಮರ ಕಟ್ಟಿಂಗ್ ಮಾಡುವ ಯಂತ್ರಗಳೊಂದಿಗೆ ಹಲವಾರು ಊರಿನ ಯುವಕರ ಸತತ 1 ಗಂಟೆಗಳ ಪರಿಶ್ರಮದಿಂದ ಕಾರ್ಯಚರಣೆ ಯಶಸ್ವಿಯಾಗಿ ಪೂರ್ತಿಗೊಂಡಿದೆ.

ಘಟನ ಸ್ಥಳದಲ್ಲಿ ಸಾಮಾಜಿಕ ಕಾರ್ಯಕರ್ತ ಎಚ್,ಎಂ ಖಾಲೀದ್ ಕೊಳ್ನಾಡು,ಅರೀಪ್ ಕರೈ,ಅಸೀಪ್ ಕರೈ,ಕರೀಂ ಬುರಾಕ್,ಸಂಶುದ್ದೀನ್,ಮುಸ್ತಫಾ,ರಝಕ್,ಅಸೀಕ್,ಹಾರೀಶ್,ನಬಾಸ್ ಮೊದಲಾದ ಪ್ರಮುಖರು ರಸ್ತೆ ಸುಗಮ ಸಂಚಾರಕ್ಕೆ ಸಹಕರಿಸಿದ್ದರು.
ಸ್ಥಳಕ್ಕೆ ಮೆಸ್ಕಾಂ ಶಾಖಾ ಅಧಿಕಾರಿ ಪ್ರಸನ್ನ ಸಕಾಲದಲ್ಲಿ ಬೇಟಿ ನೀಡಿ ರಸ್ತೆ ತೆರವುಗೊಳಿಸಲು ಮಾರ್ಗದರ್ಶನ ನೀಡಿದರು.


- Advertisement -