


ಹಿಮಾಚಲ ಪ್ರದೇಶ: ಭಾರಿ ಮಳೆಯಿಂದದಾಗಿ ರಾಜ್ಯದಲ್ಲಿ ವ್ಯಾಪಕ ಹಾನಿಯಾಗಿದ್ದು, ಕಳೆದ ಜೂನ್ 20 ರಂದು ಮಳೆ ಆರಂಭವಾದಾಗಿನಿಂದ ಇದುವರೆಗೆ ಕನಿಷ್ಠ 78 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಅಲ್ಲದೆ ಜೊತೆಗೆ 37 ಮಂದಿ ಇನ್ನೂ ನಾಪತ್ತೆಯಾಗಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಅಧಿಕಾರಿಗಳ ಪ್ರಕಾರ ಮೃತರಲ್ಲಿ 50 ಜನರು ಭೂಕುಸಿತ, ದಿಢೀರ್ ಪ್ರವಾಹ ಮತ್ತು ಮೇಘ ಸ್ಫೋಟದಂತಹ ಘಟನೆಗಳಲ್ಲಿ ಸಾವನ್ನಪ್ಪಿದರೆ, 28 ಜನರು ಕೆಟ್ಟ ಹವಾಮಾನದಿಂದ ಉಂಟಾದ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ದಿಢೀರ್ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತ ಸಂಭವಿಸಿದ್ದು, ಈ ಘಟನೆಯಿಂದ ಅನೇಕ ಮಂದಿ ತನ್ನ ಜೀವ ಕಳೆದುಕೊಂಡಿದ್ದಾರೆ ಅಲ್ಲದೆ ಮಂಡಿ ಜಿಲ್ಲೆ ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ ಎಂದು ಹೇಳಲಾಗಿದೆ. ಮಳೆ ಸಂಬಂಧಿತ ದುರಂತಗಳಾದ ಪ್ರವಾಹದಿಂದ 14 ಜನ ಮೃತಪಟ್ಟಿದ್ದು, ನೀರಿನಲ್ಲಿ ಮುಳುಗಿ ಎಂಟು ಮಂದಿ ಸಾವನ್ನಪಿದ್ದಾರೆ, ವಿದ್ಯುತ್ ಆಘಾತ ಮತ್ತು ಆಕಸ್ಮಿಕ ಜಲಪಾತಗಳಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಭೂಕುಸಿತ, ಹಾವು ಕಡಿತದಿಂದ ಕಡಿಮೆ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿವೆ.