Saturday, June 28, 2025
spot_imgspot_img
spot_imgspot_img

ಈ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್‌ ಕಡ್ಡಾಯ; ಸಾಮಾಜಿಕ ಜಾಲತಾಣದಲ್ಲಿ ಫಲಿತಾಂಶ ಬ್ಯಾನರ್‌ ವೈರಲ್‌ ..!!

- Advertisement -
- Advertisement -
vtv vitla

ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರೂ ಫಲಿತಾಂಶ ಕುರಿತು ಹಾಕಲಾದ ಬ್ಯಾನರ್‌ನಲ್ಲಿ ಹಿಂದೂ ವಿದ್ಯಾರ್ಥಿನಿಯರೂ ತಲೆಗೆ ಹಿಜಾಬ್‌ ರೀತಿಯ ವಸ್ತ್ರ ಧರಿಸಿದ್ದು ಕಂಡುಬಂದಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗಂಗಾ ಜಮ್ನಾ ಹೈಯರಿ ಸೆಕೆಂಡರಿ ಸ್ಕೂಲ್ ಚರ್ಚೆಗೆ ಗ್ರಾಸವಾಗಿದೆ. ಶಾಲೆಯ ಫಲಿತಾಂಶ ಕುರಿತು ಹಾಕಲಾದ ಬ್ಯಾನರ್‌ನಲ್ಲಿ ಹಲವೂ ಹಿಂದೂ ವಿದ್ಯಾರ್ಥಿನಿಯರೂ ತಲೆಗೆ ಹಿಜಾಬ್‌ ರೀತಿಯ ವಸ್ತ್ರ ಧರಿಸಿದ್ದು ಕಂಡುಬಂದಿದೆ.ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೋಸ್ಟರ್ ವೈರಲ್ ಆದ ಬಳಿಕ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತನಿಖೆಗೆ ಆದೇಶಿಸಿದ್ದಾರೆ. ಆದರೆ ಈ ಸಂಬಂಧ ಹಿಜಾಬ್ ಧರಿಸಿದ ಹಿಂದೂ ವಿದ್ಯಾರ್ಥಿನಿಯರ ಪೋಷಕರು ಯಾವುದೇ ದೂರು ನೀಡಿಲ್ಲ ಎಂಬುದಾಗಿ ವರದಿಯಾಗಿದೆ. ಈ ನಡುವೆ ಶಾಲೆಯ ಮಾಲೀಕ ಮುಶ್ತಾಖ್ ಖಾನ್ ಪ್ರತಿಕ್ರಿಯೆ ನೀಡಿ, ಹಿಜಾಬ್ ರೀತಿಯ ಶಿರವಸ್ತ್ರ ಕೂಡಾ ಶಾಲೆಯ ಸಮವಸ್ತ್ರದ ಭಾಗವಾಗಿದೆ. ಈ ಬಗ್ಗೆ ನಾವು ಯಾರೂ ಮೇಲೂ ಒತ್ತಡ ಹೇರಿಲ್ಲ ಎಂದಿದ್ದಾರೆ.

- Advertisement -

Related news

error: Content is protected !!