Saturday, April 20, 2024
spot_imgspot_img
spot_imgspot_img

“ಧಿಂಗ್ ಎಕ್ಸ್ ಪ್ರೆಸ್” ಚಿನ್ನದ ಹುಡುಗಿ ಹಿಮದಾಸ್ ಡಿಎಸ್ಪಿಯಾಗಿ ನೇಮಕ

- Advertisement -G L Acharya panikkar
- Advertisement -

ಗುವಾಹಟಿ: ಚಿನ್ನದ ಓಟಗಾರ್ತಿ ಹಿಮ ದಾಸ್ ಈಗ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್(DSP)ಯಾಗಿ ನೇಮಕಗೊಂಡಿದ್ದಾರೆ.

ಕ್ರೀಡೆಯಲ್ಲಿ ಸಾಧನೆ ಮಾಡಿದ ಹಲವರಿಗೆ ಕ್ಲಾಸ್ 1 ಮತ್ತು ಕ್ಲಾಸ್​ 2 ಮಟ್ಟದ ಹುದ್ದೆಗೆ ನೇಮಿಸಲು ಅಸ್ಸಾಂ ಕೌನ್ಸಿಲ್​ನಲ್ಲಿ ನಿರ್ಧರಿಸಲಾಗಿತ್ತು. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೊನ್ವಾಲ್ ಈ ಹಿಂದೆಯೇ ಹಿಮ ದಾಸ್​ರನ್ನು ಡಿಎಸ್​ಪಿಯಾಗಿ ನೇಮಕ ಮಾಡುವುದಾಗಿ ಘೋಷಿಸಿದ್ದರು.

ಹಿಮ ದಾಸ್ IAAF ವರ್ಲ್ಡ್ U20 ಚಾಂಪಿಯನ್​ಶಿಪ್​ನಲ್ಲಿ 51.46 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗಳಿಸಿದ್ದಾರೆ. 2019 ರಲ್ಲಿ ಹಿಮದಾಸ್ ಒಟ್ಟು 5 ಚಿನ್ನದ ಪದಕಗಳಗನ್ನ ಬಾಚಿಕೊಂಡರು. 400 ಮೀ. ಗುರಿಯನ್ನ 52.09 ಸೆಕೆಂಡ್​ಗಳಲ್ಲಿ ಓಡಿದ ಕೀರ್ತಿ ಹಿಮ ದಾಸ್ ಅವರದ್ದು. ಹಿಮ ದಾಸ್ ಅವರನ್ನು ಧಿಂಗ್ ಎಕ್ಸ್​ಪ್ರೆಸ್​ ಅಂತಲೂ ಕರೆಯಲಾಗುತ್ತದೆ.

- Advertisement -

Related news

error: Content is protected !!