Saturday, May 11, 2024
spot_imgspot_img
spot_imgspot_img

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಹಿಂದೂ ಭಕ್ತರ ವಾಹನ ಪಾರ್ಕಿಂಗ್‌ಗೆ ಮಾತ್ರ ಅವಕಾಶ

- Advertisement -G L Acharya panikkar
- Advertisement -

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದದ ವ್ಯವಸ್ಥಾಪನ ಸಮಿತಿ ಹೊರಡಿಸಿರುವ ಆದೇಶ, ಇದೀಗ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಇನ್ನುಮುಂದೆ ಹಿಂದೂ ಭಕ್ತರಿಗೆ ಮಾತ್ರ ಪಾರ್ಕಿಂಗ್ ಮಾಡುವುದಕ್ಕೆ ಮಾತ್ರ ಅವಕಾಶ ಎಂದು ಆದೇಶದ ಫ್ಲೆಕ್ಸ್ ಹಾಕಲಾಗಿದೆ.

ಈ ಕುರಿತಂತೆ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ಪ್ರಕಟಣೆ ಹೊರಡಿಸಿದೆ. ದೇವಾಲಯ ಮುಂಭಾಗದ ವಿಶಾಲವಾದ ದೇವರಮಾರು ಗದ್ದೆಯಲ್ಲಿ ಮುಂದಿನ ದಿನಗಳಲ್ಲಿ ಹಿಂಧೂ ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಹಿಂದೂ ಭಕ್ತಾಧಿಗಳ ಹೊರತಾಗಿ ಇತರರು ವಾಹನ ಪಾರ್ಕಿಂಗ್ ಮಾಡಿ ಹೋಗುವಂತಿಲ್ಲ. ಇದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಪಾರ್ಕಿಂಗ್ ಮಾಡಿ ಹೋದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದೆ. ಈ ಆದೇಶ ಫಲಕ ಹಾಕುತ್ತಿದ್ದಂತೆ ಪರ ವಿರೋಧಗಳ ಚರ್ಚೆ ನಡೆಯುತ್ತಿದೆ.

- Advertisement -

Related news

error: Content is protected !!