`ಕ.ಶಿ.ವಿಶ್ವನಾಥ ಸ್ಮರಣಾರ್ಥ’ ದೇವಸ್ಯ ಬಸ್ಸು ತಂಗುದಾಣ ಉದ್ಘಾಟನೆ
ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲದ ಧರ್ಮನಗರ-ಕಂಬಳಬೆಟ್ಟು ವತಿಯಿಂದ ಮೂರೂ ಗ್ರಾಮಗಳನ್ನೊಳಗೊಂಡ ಹಿಂದೂ ಬಾಂಧವರ ಕೆಸರ್ದ ಕಂಡಡ್ ಒಂಜಿ ದಿನ ಕಾರ್ಯಕ್ರಮ ಕಾರ್ಯಾಡಿ ಬೈಲಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಿಂದ ಬೈಕ್ ರ‍್ಯಾಲಿಯ ಮೂಲಕ ಕಾರ್ಯಾಡಿ ಬೈಲಿಗೆ ಬರಲಾಯಿತು. ಬಳಿಕ ಸಿದ್ಧಿವಿನಾಯಕ ಯುವಕ ಮಂಡಲ ರಿ.ಧರ್ಮನಗರ ಕಂಬಳಬೆಟ್ಟು ಇದರ ಈ ಬಾರಿಯ ಸೇವಾ ಯೋಜನೆಯ ರೂಪವಾಗಿ ನಿರ್ಮಿಸಲಾದ `ಕ.ಶಿ.ವಿಶ್ವನಾಥ ಸ್ಮರಣಾರ್ಥ’ ದೇವಸ್ಯ ಬಸ್ಸು ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ ಬಸ್ ತಂಗುದಾಣವನ್ನು ಕ ಲಕ್ಷಣ ಅಮೈ ಆರ್.ಎಸ್. ಎಂಟರ್‌ಪ್ರೆöÊಸಸ್ ವಿಟ್ಲ ಹಾಗೂ ಪ್ರಕಾಶ್ ಶೆಣೈ – ಪ್ರಕಾಶ್ ಎಂಟರ್‌ಪ್ರೈಸಸ್ ಪಡೀಲು, ಪುತ್ತೂರು ಇವರು ರಿಬ್ಬನ್ ಕತ್ತರಿಸಿ ನೂತನ ತಂಗುದಾಣದ ನಾಮ ಫಲಕ ಅನಾವರಣಗೊಳಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.
ಬಳಿಕ ಕೆಸರು ಗದ್ದೆಯಲ್ಲಿ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ದೇಲಂತಬೆಟ್ಟು ಕನ್ಯಾನ ಇವರಿಂದ ಕುಣಿತ ಭಜನೆ ನಡೆಯಿತು.
ವಿಶ್ವನಾಥ ಅಮೈ, ಅಧ್ಯಕ್ಷರು ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಶಶಿಕಲಾ, ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವೇಣುಗೋಪಾಲ ಶೆಟ್ಟಿ ಮರುವಾಳ, ಅಧ್ಯಕ್ಷರು, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ, ಸೀತಾರಾಮ ಡಿ.ಸಿ.ಸಿ. ಬ್ಯಾಂಕ್ ಕಬಕ, ಸುರೇಶ ದಾಸ್ ನೇರ್ಲಾಜೆ, ಶ್ರೀಮತಿ ಮೋಹಿನಿ ಜಯಕರ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಇಡ್ಕಿದು, ಶ್ರೀಮತಿ ದೇವಿಕಾ ಕಾರ್ಯಾಡಿ, ಇಡ್ಕಿದು ಸೇವಾ ಸಹಕಾರಿ ಸಂಘ, ಬಾಲಕೃಷ್ಣ ಅಮೈ ಕೃಷಿಕರು., ಗೋಪಾಲ ಶೆಟ್ಟಿ ಮೂಡೈಮಾರ್, ನಾಗೇಶ ಕುಂಡಡ್ಕ ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್, ಲಿಂಗಪ್ಪ ಮಂಜಪಾಲು ಉಪನ್ಯಾಸಕರು, ಕೆ.ವಿ.ಜಿ.ಕಾಲೇಜು ಅರಂತೋಡು, ಜಯಕರ ಅಮೈ ಕಾರ್ಯದರ್ಶಿ, ಶ್ರೀ ಧೂಮಾವತಿ ದೈವಸ್ಥಾನ ಅಮೈ, ವಿನೋದ್ ಮಾಡತ್ತಡ್ಕ, ಅಧ್ಯಕ್ಷರು ಬಿಲ್ಲವ ಸಂಘ ಕುಂಡಡ್ಕ, ಮಂಜುನಾಥ ಕಲ್ಲಕಟ್ಟ ಮಾಜಿ ಸದಸ್ಯರು, ಪಟ್ಟಣ ಪಂಚಾಯತ್ ವಿಟ್ಲ, ಮದನ ಗೌಡ ಮುಂಡ್ರಬೈಲು ಕೃಷಿಕರು, ಪುರುಷೋತ್ತಮ ಕೋಲ್ಪೆ ಪಂಚಾಯತ್ ಸದಸ್ಯರು ಇಡ್ಕಿದು, , ಬಾಲಸುಬ್ರಹ್ಮಣ್ಯ ಭಟ್ ಉರಿಮಜಲು, ಗುರುಪ್ರಸಾದ್ ಬಡಕ್ಕಿಲ್ಲಾಯ ವಿಟ್ಲ ಪುರೋಹಿತರು, ವಿಶ್ವನಾಥ ಪೂಜಾರಿ ಗುರ್ಜಿನಡ್ಕ, ಲೋಕೇಶ್ ಗೌಡ ಸ್ಕಂದ ಪ್ರಿಂರ‍್ಸ್ ಮರೀಲ್ – ಪುತ್ತೂರು, ಕಿಶೋರ್ ಕುಮಾರ್, ಕೆ.ಆರ್.ಅರ್ಥ್ ಮೂರ‍್ಸ್, ಸಿ.ಪಿ.ಸಿ.ಆರ್.ಐ. ವಿಟ್ಲ, ಸೇಸಪ್ಪ ನೂಜಿ ಅಕ್ಷಯ ನರ್ಸರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು ಜಯಕುಮಾರ್ ಕೆದಿಲ, ಹಾಗೂ ಸ್ಮಶಾನ ನಿರ್ವಹಕರು ನಾರಾಯಣ ನಾಯ್ಕ ಮುದಲೆಗುಂಡಿ ಇವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಗೆ, ಮಹಿಳೆಯರಿಗೆ ಪುರುಷರಿಗೆ ಸೇರಿದಂತೆ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿಟ್ಲಮುಡ್ನೂರು-ಇಡ್ಕಿದು-ಕುಳ ಈ ಮೂರು ಗ್ರಾಮಗಳ ೫೫೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತುಳುನಾಡಿನಲ್ಲಿ ಭಾರೀ ಸಂಚಲನ ಮೂಡಿಸಿದ ಧರ್ಮದೈವ ಸಿನಿಮಾ ತಂಡ ಕಾರ್ಯಕ್ರಮಕ್ಕೆ ಆಗಮಿಸಿ, ಶುಭಹಾರೈಸಿ ಸಿನಿಮಾ ಬಗ್ಗೆ ಮಾತನಾಡಿದರು.
ಸಂಜೆ ಜನಾರ್ದನ ಕಾರ‍್ಯಾಡಿ, ಗೌರವಾಧ್ಯಕ್ಷರು, ಸಿದ್ದಿವಿನಾಯಕ ಯುವಕ ಮಂಡಲ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು, ಸಹಜ್ ರೈ ಬಳಜ್ಜ ಸ್ಥಾಪಕಾಧ್ಯಕ್ಷರು, ವಿಜಯ ಸಾಮ್ರಾಟ್ ಪುತ್ತೂರು., ದಯಾನಂದ ಶೆಟ್ಟಿ ಉಜಿರೆಮಾರು, ಗೌರವಾಧ್ಯಕ್ಷರು, ಯುವಕೇಸರಿ ಯುವಕವೃಂದ ಅತಿಕಾರಬೈಲು, ದಿನೇಶ್ ಕುಮಾರ್ ಬಜಾಲ್, ಹಿಂದೂ ಯುವಸೇನೆ ಮಂಗಳೂರು, ಪುನೀತ್ ಮಾಡತ್ತಾರು ಅಧ್ಯಕ್ಷರು, ಗ್ರಾಮ ಪಂಚಾಯತ್ ವಿಟ್ಲಮುಡ್ನೂರು, ಕಾಮಚಕ್ರೇಶ್ವರ ಪಾಲೆತ್ತಾಯ, ಅರ್ಚಕರು, ಜಯದುರ್ಗಾಪರಮೇಶ್ವರೀ ದೇವಸ್ಥಾನ ಧರ್ಮನಗರ, ಉದಯ ಗೋವಿಂದಯ್ಯ, ಅಧ್ಯಕ್ಷರು, ಇಡ್ಕಿದು ಹಾಲು ಉತ್ಪಾದಕರ ಸಹಕಾರ ಸಂಘ, ಆನಂದ ಗೌಡ ತೆಂಕಿಲ, ಪ್ರಧಾನ ಕಾರ್ಯದರ್ಶಿ, ಯುವ ಒಕ್ಕಲಿಗ ಗೌಡ ಸಂಘ ಪುತ್ತೂರು., ಸಂಜೀವ ಪೆಲತ್ತಿಂಜ, ಇಡ್ಕಿದು ಸೇವಾ ಸಹಕಾರಿ ಸಂಘ ನಿ., ರಾಜೇಶ್ ಆರ್. ಕೆ. ಅಧ್ಯಕ್ಷರು, ಯುವವಾಹಿನಿ ರಿ. ವಿಟ್ಲ, ಚರಣ್ ಕಾಪುಮಜಲು,ವಿಕ್ರಮ್ ಭಟ್ ಉರಿಮಜಲು, ಶೇಖರ ಪೂಜಾರಿ ಅಳಕೆಮಜಲು, ವಿ.ಜಿ. ಕುಟ್ಟಿ ಉರಿಮಜಲು, ದಿನೇಶ್ ಕೋಡಿಜಾಲು, ನಿರ್ದೇಶಕರು, ವಿಟ್ಲ ವ್ಯವಸಾಯ ಸೇ. ಸಹಕಾರಿ ಸಂಘ, ವಾರಿಜಾ ಮುಖ್ಯೋಪಾಧ್ಯಾಯರು, ಕಂಬಳಬೆಟ್ಟು ಹಿ.ಪ್ರಾ.ಶಾಲೆ, ಶ್ರೀಮತಿ ವಿದ್ಯಾ ಸುನಿಲ್‌ರಾಜ್ ವಿಸ್ತರಣಾಧಿಕಾರಿ, ದ.ಕ.ಜಿ.ಹಾಲು ಉ.ಸ.ಸಂಘ., ಶ್ರೀಮತಿ ಗೀತಾ ಕೊಂಕೋಡಿ, ಉಪನ್ಯಾಸಕರು, ಶ್ರೀಮತಿ ನಿರ್ಮಲಾ ಸುರೇಂದ್ರ ಕಾರ್ಯಾಡಿ, ಶ್ರೀಮತಿ ಲತಾ ಧರ್ಮನಗರ, ಶ್ರೀಮತಿ ವಿಜಯಲಕ್ಷ್ಮೀ ನಿರ್ದೇಶಕರು, ಇಡ್ಕಿದು ಸೇ. ಸ. ಸಂಘ., ಶ್ರೀಮತಿ ಲತಾ ಚಿದಾನಂದ ಪೆಲತ್ತಿಂಜ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಸಿದ್ದಿವಿನಾಯಕ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು, ಮಕ್ಕಳು, ಮಹಿಳೆಯರು, ಪುರುಷರು ಸಾರ್ವಜನಿಕರು ಸೇರಿದಂತೆ ಎಲ್ಲರೂ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಸಿದ್ಧಿವಿನಾಯಕ ಯುವಕ ಮಂಡಲ (ರಿ) ಇದರ ಸ್ಥಾಪಕಾಧ್ಯಕ್ಷ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡೈಮಾರ್ ಹಾಗೂ ಕಾರ್ಯದರ್ಶಿ ಜೈದೀಪ್ ಅಮೈ ಕಾರ್ಯಕ್ರಮ ನಿರೂಪಿಸಿದರು.