Friday, July 24, 2026
spot_imgspot_img
spot_imgspot_img

ಪ್ರವೀಣ್ ನೆಟ್ಟಾರು ಹತ್ಯೆ; ಮೂವರ ಹಂತಕರ ಬಂಧನ – ಎಡಿಜಿಪಿ ಅಲೋಕ್ ಕುಮಾರ್ ಅಧೀಕೃತ ಮಾಹಿತಿ

- Advertisement -
- Advertisement -

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದುಷ್ಕರ್ಮಿಗಳ ತಂಡವು ಜುಲೈ 26 ರ ರಾತ್ರಿ ಪ್ರವೀಣ್ ನೆಟ್ಟಾರು ಎಂಬವರ ರಕ್ತ ಹರಿಸಿತ್ತು. ಈ ಘಟನೆಗೆ ಸಂಬಂಧಿಸಿ ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ನಿನ್ನೆಯಿಂದಲೇ ನೇರವಾಗಿ ಭಾಗಿಯಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿಗೆ ಇನ್ನಷ್ಟು ಬಲ ಬಂದಿದೆ. ಈ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್‍ ಪತ್ರಿಕಾಗೋಷ್ಠಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾಗಿ ಅಧೀಕೃತವಾಗಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಶಿಯಾಬ್, ರಿಯಾಝ್, ಬಶೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು. ಹೀಗಾಗಿ 15 ದಿವಸಗಳ ನಂತರ ಬಂಧಿಸಿದ್ದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಈ ಪ್ರಕರಣವನ್ನು ಭೇದಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಅಲೋಕ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಬಂಧಿತ ಮೂವರು ಕೂಡ ಸ್ಥಳೀಯರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೃತ್ಯ ಹಾಗೂ ಆರೋಪಿಗಳಿಗೆ ಸಹಕರಿಸಿದವರಿಗೂ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದಿದ್ದಾರೆ.

ಯಾವ ಕಾರಣಕ್ಕಾಗಿ ಹತ್ಯೆ..?
ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎಂಬುವುದು ಸಹ ಮುಂದಿನ ತನಿಖೆಯಲ್ಲಿ ತಿಳಿದು ಬರಲಿದೆ ಎಂದು ಹೇಳಿದ್ದಾರೆ
.

ಚೆಕ್ ಪೋಸ್ಟ್‌ ಬಳಿ ಅರೆಸ್ಟ್‌..!
ಕೇರಳ ಕರ್ನಾಟಕ ಗಡಿ ಭಾಗ ತಲಪಾಡಿ ಚೆಕ್ ಪೋಸ್ಟ್‌ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರವೀಣ್ ಹತ್ಯೆಗೈದ ಮೂವರು ಅಂದರ್..!
ಸುಳ್ಯ ಮೂಲದ ಶಿಹಾಬ್, ಕೊಕೋ ಕಂಪನಿಗೆ ಕೋಕೊ ಸಪ್ಲೈ ಮಾಡುತ್ತಿದ್ದನು.
ರಿಯಾಝ್ ಅಂಕತ್ತಡ್ಕ, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.
ಎಲಿಮಲೆ ನಿವಾಸಿ ಬಶೀರ್, ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು.

ಈ ಕೃತ್ಯಕ್ಕೆ ಹಂತಕರು 2 ಬೈಕ್, 4 ಕಾರನ್ನು ಬಳಸಿದ್ದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಝಾಕೀರ್ ಸವಣೂರು, ಶಫೀಕ್ ಬೆಳ್ಳಾರೆ

ಬಂಧಿತರ ಸಂಖ್ಯೆ 10 ಕ್ಕೆ ಏರಿಕೆ..!
ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈಗ ಮೂವರನ್ನು ಬಂಧಿಸಿದ್ದು ಒಟ್ಟು ಬಂಧಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.

ಅಬೀದ್ ನೌಫಲ್

ಪ್ರವೀಣ್ ಹತ್ಯೆ ಪ್ರಕರಣದ ಆರೋಪಿಗಳ ವಿವರ:

ಸುಳ್ಯ ನಾವೂರು ನಿವಾಸಿ ಅಬೀದ್ (22),

ಬೆಳ್ಳಾರ ಗೌರಿಹೊಳ ನಿವಾಸಿ ನೌಫಲ್(28),

ಬೆಳ್ಳಾರೆ ಪಲ್ಲಿಮಜಲು ನಿವಾಸಿ ಸದ್ಧಾಂ (32)

ಬೆಳ್ಳಾರೆ ಪಲ್ಲಿಮಜಲು ನಿವಾಸಿ ಹಾರಿಸ್ (42),

ಝಾಕೀರ್ ಸವಣೂರು (29),

ಶಫೀಕ್ ಬೆಳ್ಳಾರೆ (27),

ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33),

ಸುಳ್ಯದ ಶಿಯಾಬ್(33),

ಅಂಕತ್ತಡ್ಕ ರಿಯಾಝ್ (27),

ಎಲಿಮಲೆ ಬಶೀರ್(29

- Advertisement -

Related news

error: Content is protected !!