- Advertisement -
- Advertisement -
ಒಟ್ಟಾವ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂಸಭಾ ದೇವಾಲಯದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೋರ್ವ ಖಲಿಸ್ತಾನಿ ಬೆಂಬಲಿಗನನ್ನು ಪೀಲ್ ಪ್ರದೇಶದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಇಂದರ್‌ಜೀತ್ ಗೋಸಲ್ ಎಂದು ಗುರುತಿಸಲಾಗಿದೆ.
ಈತ ಕೆನಡಾದಲ್ಲಿ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸಂಯೋಜಕನಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ ಸಮಾರಂಭವೊಂದರಲ್ಲಿ ಖಲಿಸ್ತಾನಿ ಧ್ವಜವನ್ನು ಹಿಡಿದು ಭಾರತೀಯ ತ್ರಿವರ್ಣ ಧ್ವಜದ ಮೇಲೆ ನಿಂತಿರುವ ಇಂದರ್‌ಜೀತ್ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನವೆಂಬರ್ 3ರಂದು ಖಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂಸಭಾ ದೇವಾಲಯದ ಆವರಣದೊಳಗೆ ನುಗ್ಗಿ, ಅಲ್ಲಿನ ಜನರ ಮೇಲೆ ದಾಳಿ ನಡೆಸಿತ್ತು. ಇದನ್ನು ಭಾರತದ ಹೈಕಮಿಷನ್ ಮತ್ತು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿತ್ತು.
- Advertisement -