Wednesday, April 23, 2025
spot_imgspot_img
spot_imgspot_img

ಹಿರಿಯಡ್ಕ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್‌ನಿಂದ ಚಿನ್ನ ಕಳವು..!

- Advertisement -
- Advertisement -

ಹಿರಿಯಡ್ಕ: ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಜ್ಯುವೆಲ್ಲರಿ ಅಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಫೆ.21ರಂದು ಸಂಜೆ ವೇಳೆ ಹಿರಿಯಡ್ಕದಲ್ಲಿ ನಡೆದಿದೆ.

ಅಂಜಾರು ಗ್ರಾಮದ ರತ್ನಾಕರ ಎಂಬವರ ಹಿರಿಯಡ್ಕ ಪೇಟೆಯಲ್ಲಿರುವ ಶ್ರೀಲಕ್ಷ್ಮೀ ಅನಂತ ಪದ್ಮನಾಭ ಜ್ಯುವೆಲ್ಲರಿ ಶಾಪ್‌ಗೆ ನವರತ್ನ ಖರೀದಿ ಮಾಡಲು ಅಪರಿಚಿತ ವ್ಯಕ್ತಿಯೋರ್ವ ಬಂದಿದ್ದು, ನವರತ್ನವೊಂದನ್ನು ಖರೀದಿಸಿ ಆ ನಂತರ ಅಂಗಡಿ ಮಾಲಕರಲ್ಲಿ ಬೇರೆ ಚಿನ್ನ ತೋರಿಸಲು ಹೇಳಿ ಅವರ ಗಮನಕ್ಕೆ ಬಾರದಂತೆ ಡ್ರಾವರ್‌ಗೆ ಕೈಹಾಕಿ ರಿಪೇರಿಗಾಗಿ ಗ್ರಾಹಕರು ನೀಡಿದ್ದ 22.35 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!