Tuesday, April 30, 2024
spot_imgspot_img
spot_imgspot_img

ಮಂಗಳೂರು: ಫ್ಲವರ್ ಸ್ಟಾಲ್‌ನಿಂದ 9 ಲಕ್ಷ ಹಣ ಕದ್ದು ಪಾಳು ಮನೆಯಲ್ಲಿ ಬಚ್ಚಿಟ್ಟ ಕಳ್ಳ..! ಕಟ್ಟಡ ನೆಲಸಮಗೊಳಿಸುವ ವೇಳೆ ಜೆಸಿಬಿ ಆಪರೇಟರ್‌ಗೆ ಸಿಕ್ತು ಹಣ..!

- Advertisement -G L Acharya panikkar
- Advertisement -

9 ಲಕ್ಷ ರೂಪಾಯಿ ಕಳವುಗೈದ ಖತರ್ನಾಕ್ ಆರೋಪಿ ಮಾಡಿದ್ದು ಮಾತ್ರ ಅಂತಿಂಥ ಕೆಲಸವಲ್ಲ. ಅಗತ್ಯವಿರುವ ಸಂದರ್ಭದಲ್ಲಿ ತೆಗೆದುಕೊಳ್ಳೋಣಾ ಅಂತ ಪಾಳು ಬಿದ್ದ ಕಟ್ಟಡದಲ್ಲಿ ಹುದುಗಿಸಿ ಇಟ್ಟಿದ್ದ. ಪಾಳು ಬಿದ್ದ ಕಟ್ಟಡವನ್ನು ಮಾಲೀಕ ನೆಲಸಮ ಮಾಡಲು ಹೊರಟಾಗ ಜೆಸಿಬಿ ಆಪರೇಟರ್​​ ಕಣ್ಣಿಗೆ ಭೂಮಿಯಲ್ಲಿಟ್ಟ ಹಣ ತಿಳಿದುಬಂದಿದೆ. ಎಲ್ಲ ಕೆಲಸಗಾರರನ್ನು ಕರೆದ ಜೆಸಿಬಿ ಆಪರೇಟರ್‍ ಹಣ ಹಂಚಿಕೊಂಡು ತಮಗೇನು ಗೊತ್ತೆ ಇಲ್ಲ ಎಂಬಂತೆ ಸುಮ್ಮನಾಗಿದ್ದರು.‌ಆದ್ರೆ ಕಳ್ಳತನದ ಜಾಲದ ಜಾಡು ಹಿಡಿದ ಪೊಲೀಸರಿಗೆ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದರೊಂದಿಗೆ ಘಟನೆಯ ವಿವರವೂ ಪೊಲೀಸರಿಗೆ ಸಿಕ್ಕಿದೆ.

ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದು ದಾಖಲಾಗಿತ್ತು. ಹೂವಿನ ವ್ಯಾಪಾರಿ ಒಬ್ಬರು ತಮ್ಮ ಅಂಗಡಿಯಲ್ಲಿಟ್ಟಿದ್ದ 9 ಲಕ್ಷ ರೂಪಾಯಿ ಹಣವನ್ನು ದುಷ್ಕರ್ಮಿಯೋರ್ವ ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದ. ಅಲ್ಲದೇ ಸಿಸಿಟಿವಿ ಡಿವಿಆರ್​ ಕೂಡ ಕದ್ದು ಕೊಂಡ್ಯೊದಿದ್ದ. ಈ ಪ್ರಕರಣದಲ್ಲಿ ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳ್ಳತನ ಹಣ ರಿಕವರಿ ಮಾಡಲು ಮುಂದಾದಗ ಶಾಕಿಂಗ್​ ಅಂಶಗಳು ಬೆಳಕಿಗೆ ಬಂದಿದೆ.

ಬೆಳ್ತಂಗಡಿ ನಿವಾಸಿ ಹಮೀದ್ (48) ಬಂಧಿತ ಆರೋಪಿ. ಕಳೆದ ವರ್ಷ ನವೆಂಬರ್ ತಿಂಗಳ ಮಧ್ಯದಲ್ಲಿ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯ ನಲಪಾಡ್ ಅಪ್ಸರಾ ಚೇಂಬರ್ಸ್‌ ಕಟ್ಟಡದ ನೆಲ ಮಹಡಿಯಲ್ಲಿರುವ ಹೂವಿನ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. 9 ಲಕ್ಷ ರೂ. ಕಳವಾಗಿದೆ ಎಂದು ದೂರಿನಲ್ಲಿ ಮಾಲೀಕ ತಿಳಿಸಿದ್ದಾರೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಹೂವಿನ ಅಂಗಡಿಯಿಂದ ಕಳ್ಳತನ ಪ್ರಕರಣ ಮಾಡಿದ್ದ ಹಣದಲ್ಲಿ ಆರೋಪಿ 3.20 ಲಕ್ಷ ರೂಪಾಯಿ ತೆಗೆದುಕೊಂಡು ಮೋಜುಮಸ್ತಿ ಮಾಡಿದ್ದ. ಉಳಿದ ಹಣವನ್ನು ತನಗೆ ಅಗತ್ಯವಿರುವ ಸಂದರ್ಭದಲ್ಲಿ ತೆಗೆದುಕೊಳ್ಳೋಣಾ ಅಂತ ನೆಲ್ಲಿಕಾಯಿ ರಸ್ತೆಯ ಕುಸಿದು ಬಿದಿದ್ದ ಪಾಳು ಕಟ್ಟಡದಲ್ಲಿ ಹುದುಗಿಸಿಟ್ಟು ತೆರಳಿದ್ದ.

ಕೆಲ ಸಮಯದ ಬಳಿಕ ತನ್ನಲ್ಲಿರುವ ಹಣ ಖಾಲಿಯಾಗುತ್ತಿದ್ದಂತೆ ಅರೋಪಿ ಹಮೀದ್​ ಹುದುಗಿಸಿಟ್ಟಿದ್ದ ಹಣವನ್ನು ಕೊಂಡೊಯ್ಯುವ ಯೋಜನೆ ಹಾಕಿ ಪಾಳು ಮನೆಯ ಬಳಿ ಆಗಮಿಸಿದ್ದ. ಆದರೆ ಪಾಳು ಬಿದ್ದ ಕಟ್ಟಡವನ್ನು ಮಾಲೀಕ ನೆಲಸಮ ಮಾಡಿದ್ದರು. ಆದರೆ ಅಂದು ಮನೆ ನೆಲಸಮ ಮಾಡುವ ವೇಳೆ ಭೂಮಿಯಲ್ಲಿಟ್ಟ ಹಣ ಜೆಸಿಬಿ ಆಪರೇಟರ್​​ ಕಣ್ಣಿಗೆ ಬಿದ್ದಿತ್ತು.

ಹಣ ನೋಡಿದ ಬಳಿಕ ಅಲ್ಲಿ ಕೆಲಸ ಮಾಡುವ ಎಲ್ಲ ಕೆಲಸಗಾರರನ್ನು ಕರೆದು ಹಣ ಹಂಚಿಕೊಂಡು ತಮಗೇನು ಗೊತ್ತೆ ಇಲ್ಲ ಎಂಬಂತೆ ಸುಮ್ಮನಾಗಿದ್ದರು. ಆದರೆ ಈ ನಡುವೆ ಪೊಲೀಸರು ಕಳ್ಳರ ಮೇಲೆ ನಿಗಾ ಇಟ್ಟಿದ್ದ ವೇಳೆ ಅರೋಪಿ ಹಮೀದ್ ಸಿಕ್ಕಿ ಬಿದ್ದಿದ್ದ. ಅಲ್ಲದೇ ವಿಚಾರಣೆ ವೇಳೆ ತಾನೇ ಹೂವಿನ ಅಂಗಡಿಯಲ್ಲಿ ಕಳ್ಳ ಮಾಡಿದ್ದು ಹಣವನ್ನು ಪಾಳು ಮನೆಯಲ್ಲಿ ಇಟ್ಟಿದ್ದಾಗಿ ತಿಳಿಸಿದ್ದ.

ಆರೋಪಿ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಮನೆ ತೆರವು ಮಾಡಿರುವುದು ಕಂಡು ಬಂದಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಅಂದು ಅಲ್ಲಿ ಕೆಲಸ ಮಾಡಿದ್ದ ಜೆಸಿಬಿ ಆಪರೇಟರ್​​ನನ್ನು ಕರೆದು ವಿಚಾರಣೆ ನಡೆಸಿದಾಗ ಹಣ ಸಿಕ್ಕಿರೋದು ಸ್ಪಷ್ಟವಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ, ನಮ್ಮ ಕುಟುಂಬದಲ್ಲಿ ಬಹಳ ಕಷ್ಟ ಇತ್ತು. ದೇವರೇ ನಮಗೆ ಹಣ ಕೊಟ್ಟ ಅಂತ ನಾವು ಕಷ್ಟಕ್ಕೆ ಬಳಕೆ ಮಾಡಿಕೊಂಡಿದ್ದೇವು ಎಂದು ಜೆಸಿಬಿ ಆಪರೇಟರ್​ ತಿಳಿಸಿದ್ದ. ಸದ್ಯ ಪೊಲೀಸರು ಕಳ್ಳತನವಾಗಿದ್ದ 9 ಲಕ್ಷ ರೂಪಾಯಿ ಹಣದಲ್ಲಿ 5.80 ಲಕ್ಷ ರೂಪಾಯಿಯನ್ನು ರಿಕವರಿ ಮಾಡಿದ್ದಾರೆ.

ಇನ್ನು, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕುಖ್ಯಾತ ಕಳ್ಳನ ಮೇಲೆ ಈಗಾಗಲೇ ಜಿಲ್ಲೆಯಲ್ಲಿ 22 ವಾರೆಂಟ್ ಇರೋದು ಕೂಡ ತಿಳಿದು ಬಂದಿದೆ. ಅಲ್ಲದೇ ರಾಜ್ಯಾದಾದ್ಯಂತ ಸುಮಾರು 35ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆಯಂತೆ. ಸದ್ಯ ಪ್ರಕರಣಗಳ ಹೆಚ್ಚಿನ ತನಿಖೆಯನ್ನು ನಡೆಸಿರುವ ಪೊಲೀಸರು ಆರೋಪಿಯನ್ನು ಜೈಲಿಗೆ ತಳ್ಳಿದ್ದಾರೆ.

- Advertisement -

Related news

error: Content is protected !!