- Advertisement -
- Advertisement -



ಶಹಾಪುರ: ಯಾದಗಿರಿಯಿಂದ ಶಹಾಪುರದತ್ತ ಬರುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ ತಾಲೂಕಿನ ದೋರನಳ್ಳಿ ಕ್ಯಾಂಪ್ ಸಮೀಪ ಶನಿವಾರ ರಾತ್ರಿ ನಡೆದಿದೆ.

ಪಟ್ಟಣದ ಜೀವೇಶ್ವರ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕನಕಣ್ಣ ಹಾಗೂ ಈಶ್ವರ ಮೃತಪಟ್ಟವರು. ಜೊತೆಗಿದ್ದ ಮಹೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಮೂವರು ಗೆಳೆಯರು ಗೆಳೆಯರೊಂದಿಗೆ ಯಾದಗಿರಿ ನಗರಕ್ಕೆ ತೆರಳಿದ್ದವರು ಮರಳಿ ರಾತ್ರಿ ವೇಳೆ ಶಹಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ದೋರನಳ್ಳಿ ಕ್ಯಾಂಪ್ ಬಳಿ ಅಪರಿಚಿತ ವಾಹನೊಂದು ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಈ ಕುರಿತು ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನದ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- Advertisement -








