- Advertisement -
- Advertisement -
ಬೈಕ್‌ಗೆ ಡಿಕ್ಕಿ ಹೊಡೆದು ಕ್ಯಾಂಟರ್ ಪಲ್ಟಿ ಹೊಡೆದಿದ್ದು, ತಾಯಿ, ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನ ನಗರದ ಬಿ. ಕಾಟೀಹಳ್ಳಿಯಲ್ಲಿ ನಡೆದಿದೆ.
ಮೃತಪಟ್ಟವರು ವಕೀಲನಾಗಿರುವ ಸತೀಶ್ (42), ತಾಯಿ ಕಮಲಮ್ಮ (71) ಎಂದು ಗುರುತಿಸಲಾಗದೆ.
ತನ್ನ ತಾಯಿ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಇಬ್ಬರೂ ರಸ್ತೆ ಪಕ್ಕಕ್ಕೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಪಘಾತ ಸಂಭವಿಸಿದ ನಂತರ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಾಸನ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಟ್ರಾಫಿಕ್ ಜಾಮ್ ಆಗಿದ್ದ ರಸ್ತೆಯಲ್ಲಿ ವಾಹನಗಳ ತೆರವಿಗೆ ಹರಸಾಹಸ ಪಟ್ಟಿದ್ದಾರೆ.
- Advertisement -