Friday, May 10, 2024
spot_imgspot_img
spot_imgspot_img

ಬಜ್ಪೆ: ಮನೆಗೆ ನುಗ್ಗಿ ಗೃಹಪಯೋಗಿ ವಸ್ತುಗಳ ಕಳವು – ಇಬ್ಬರ ಬಂಧನ

- Advertisement -G L Acharya panikkar
- Advertisement -

ಬಜ್ಪೆ: ಮನೆಯಿಂದ ಗೃಹಪಯೋಗಿ ವಸ್ತುಗಳನ್ನು ಕಳವುಗೈದಿದ್ದ ಘಟನೆ ಬಡಗ ಎಡಪದವು ತಿಪ್ಪಬೆಟ್ಟುವಿನಲ್ಲಿ ನಡೆದಿದ್ದು, ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಡಗ ಎಡಪದವು ಗ್ರಾಮದ ನಿವಾಸಿ ರವಿ ಶೆಟ್ಟಿ (55), ಮೂಡುಬಿದಿರೆ ತೋಡಾರು ಗ್ರಾಮದ ನಿವಾಸಿ ಶಿವಪ್ರಸಾದ್ ಶೆಟ್ಟಿ (29) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಇದರ ಒಟ್ಟು ಮೌಲ್ಯ 1.40 ಲಕ್ಷ ರೂ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌. ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕರಾದ ನಂದೀಶ್ವರ ಬಿ ಕುಂಬಾರ ಪಿಎಸ್ಐಗಳಾದ ಗುರಪ್ಪ ಕಾಂತಿ, ರೇವಣಸಿದ್ದಪ್ಪ, ರವಿ ಎನ್.ಎನ್., ಶೋಭಾ ಆರ್, ಎಎಸ್ಐ ರಾಮ ಪೂಜಾರಿ ಮತ್ತು ಸಿಬ್ಬಂದಿಗಳಾದ ಸುಜನ್, ಪುರುಷೋತ್ತಮ, ರಶೀದ್, ದೇವಪ್ಪ ಹೊಸಮನಿ, ಬಸವರಾಜ ಪಾಟೀಲ್, ಪ್ರಕಾಶ್, ಚಿದಾನಂದ ಮೊದಲಾದವರು ಭಾಗವಹಿಸಿದ್ದರು

- Advertisement -

Related news

error: Content is protected !!