Thursday, August 27, 2026
spot_imgspot_img
spot_imgspot_img

ಬಂಟ್ವಾಳ: ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಸಾವು

- Advertisement -
- Advertisement -

ಬಂಟ್ವಾಳ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳದ ಕುರ್ನಾಡು ಎಂಬಲ್ಲಿ ನಡೆದಿದೆ.

ಕುರ್ನಾಡು ಗ್ರಾಮದ ಹೂವಿನಕೊಪ್ಪಲು ನಿವಾಸಿ ವಿಶ್ವನಾಥ (52) ಎಂಬುವವರು ಮೃತಪಟ್ಟ ವ್ಯಕ್ತಿ , ಅವರು ಚೇಳೂರು ಗ್ರಾಮದ ಬರೆ ಎಂಬಲ್ಲಿ ಮನೆಯೊಂದರ ಕೂಲಿ ಕೆಲಸಕ್ಕೆಂದು ಹೋಗಿದ್ದು,. ಅಲ್ಲಿ ಅಡಿಕೆ ತೋಟಕ್ಕೆ ದನದ ಗೊಬ್ಬರವನ್ನು ಹಾಕುತ್ತಿದ್ದರು, ಸಂಜೆ ವೇಳೆಗೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೆಲಕ್ಕೆ ಕುಸಿದು ಬಿದ್ದು ಮೂರ್ಚೆ ಹೋಗಿದ್ದು, ಕೂಡಲೇ ಮಂಗಳೂರು ಕಣಚೂರು ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!