Saturday, June 28, 2025
spot_imgspot_img
spot_imgspot_img

ವಿಟ್ಲ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ.) ವಿಟ್ಲ ವಲಯದ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -
- Advertisement -

vtv vitla

ಕಬಡ್ಡಿ ಪ್ರಿಯರ ಗಮನ ಸೆಳೆಯಲಿದೆ ಮಹಿಳೆಯರ ಪ್ರೊ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ವಿಟ್ಲ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ.) ಬಂಟ್ವಾಳ ತಾಲೂಕು, ದ.ಕ ಇದರ ವಿಟ್ಲ ವಲಯದ ವತಿಯಿಂದ ದಸರಾ ಕ್ರೀಡೋತ್ಸವ ನಡೆಯಲಿದೆ.

ಮಹಿಳೆಯರ ಹಾಗೂ ಪುರುಷರ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಅ.7ರಂದು ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (RMSA) ವಿಟ್ಲ ಸಂಜೆ ಗಂಟೆ 3.00ರಿಂದ ನಡೆಯಲಿದೆ.

ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಕ್ರೀಡಾಭಿಮಾನಿಗಳ ಗಮನ ಸೆಳೆಯಲಿದೆ. ವಿಶೇಷವಾಗಿ ಮಹಿಳಾ ಕಬಡ್ಡಿ ತಂಡಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ ಹಾಗೂ ಪುರುಷರ ತಂಡಕ್ಕೆ 1000/-ರೂ. ಪ್ರವೇಶ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.

ಉದ್ಘಾಟನಾ ಸಮಾರಂಭವು ಸಂಜೆ 3.00ಗಂಟೆಗೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭ ನಡೆದ ಬಳಿಕ ಮಹಿಳೆಯರ ಕಬಡ್ಡಿ ಪಂದ್ಯಾಟವು ಪ್ರೇಕ್ಷಕರಿಗೆ ಕುತೂಹಲ ಕೆರಳಿಸಲಿದೆ. ಬಳಿಕ ಸಂಜೆ 7.30ರಿಂದ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮಹಿಳೆಯರ ಪಂದ್ಯಾಟದಲ್ಲಿ ಪ್ರಥಮ ಬಹುಮಾನ 7,000/- ರೂ.ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 4,000/- ರೂ.ನಗದು ಹಾಗೂ ಟ್ರೋಫಿ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಟ್ರೋಫಿ ನೀಡಲಾಗುವುದು.

ಪುರುಪರ ಪಂದ್ಯಾಟದಲ್ಲಿ ಪ್ರಥಮ ಬಹುಮಾನ 15,000/- ರೂ.ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 10,000/- ರೂ.ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ 5,000/- ರೂ.ನಗದು ಹಾಗೂ ಟ್ರೋಫಿ ಹಾಗೂ ಚತುರ್ಥ ಬಹುಮಾನ 5,000/- ರೂ.ನಗದು ಹಾಗೂ ಟ್ರೋಫಿ ನೀಡಲಾಗುವುದು.

ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ವಿಟ್ಲ ವಲಯದ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ.) ವತಿಯಿಂದ ಆಧಾರ್‌ ತಿದ್ದುಪಡಿ ಕ್ಯಾಂಪ್‌, ರಕ್ತದಾನ ಶಿಬಿರ, ಅಂಗನವಾಡಿಗೆ ಕುರ್ಚಿ ವಿತರಣೆ, ಅಸಕ್ತರಿಗೆ ಸಹಾಯಧನ ವಿತರಣೆ, ನೆರೆ ಸಂತ್ರಸ್ತರಿಗೆ ಅಕ್ಕಿ ವಿತರಣೆ ಹಾಗೂ ಸಹಾಯಧನ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪಂದ್ಯಾಟದ ನೇರಪ್ರಸಾರ ವಿಟಿವಿ ಮಾಧ್ಯಮದಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901877693, 9591188847

- Advertisement -

Related news

error: Content is protected !!