Sunday, June 29, 2025
spot_imgspot_img
spot_imgspot_img

ಹನಿ ಟ್ರ್ಯಾಪ್ ಪ್ರಕರಣ : ದಂಪತಿ ಸೇರಿ ನಾಲ್ವರ ಬಂಧನ

- Advertisement -
- Advertisement -

ಉದ್ಯಮಿಯನ್ನು ಹನಿ ಟ್ರ್ಯಾಪ್ ಮಾಡಿದ ಆರೋಪದ ಮೇಲೆ ವಿವಾಹಿತ ದಂಪತಿ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಖಲೀಮ್, ಸಭಾ, ಓಬೇದ್ ರಕೀಮ್ ಮತ್ತು ಅತೀಕ್ ಎಂದು ಗುರುತಿಸಲಾಗಿದೆ.

ಉದ್ಯಮಿಯಾದ ಅತಿಯುಲ್ಲಾ ಅವರನ್ನು ಖಲೀಮ್ ಮತ್ತು ಸಭಾ ದಂಪತಿಗಳು ಹನಿ ಟ್ರ್ಯಾಪ್ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಖಲೀಮ್ ತನ್ನ ಪತ್ನಿಯನ್ನು ವಿಧವೆಯಂತೆ ಬಿಂಬಿಸಿದ ಪತಿಯೊಬ್ಬ ಆಕೆಯನ್ನು ಉದ್ಯಮಿಯೊಂದಿಗೆ ಕಳುಹಿಸಿ ಆತನನ್ನು ಬಲೆಗೆ ಬೀಳಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಉದ್ಯಮಿ ಅತೀವುಲ್ಲಾ ಮತ್ತು ಸಭಾ ದೈಹಿಕ ಸಂಪರ್ಕ ಮಾಡಿದ್ದು, ನಂತರ ಆರ್‌ಆರ್ ನಗರ ಪ್ರದೇಶದಲ್ಲಿ ಹೋಟೆಲ್ ರೂಂ ಬುಕ್ ಮಾಡಲು ಆಧಾರ್ ಕಾರ್ಡ್‌ನೊಂದಿಗೆ ತನ್ನೊಂದಿಗೆ ಬರುವಂತೆ ಸಭಾ ಅತೀವುಲ್ಲಾನನ್ನು ಕರೆದಿದ್ದಾಳೆ. ಅತಿವುಲ್ಲಾ ಹೋಟೆಲ್ ಕೋಣೆಗೆ ಪ್ರವೇಶಿಸುತ್ತಿದ್ದಂತೆ ಆರೋಪಿಗಳು ಒಳನುಗ್ಗಿ ಈ ಸಂಬಂಧವನ್ನು ಕುಟುಂಬದಿಂದ ಗೌಪ್ಯವಾಗಿಡಲು 6 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಉದ್ಯಮಿ ಅತೀವುಲ್ಲಾ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಹೋಟೆಲ್‌ಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹನಿಟ್ರ್ಯಾಪ್ ಮಾಡಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಬಗ್ಗೆ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!