Wednesday, July 2, 2025
spot_imgspot_img
spot_imgspot_img

ಹನಿಟ್ರ್ಯಾಪ್​ ವಂಚಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

- Advertisement -
- Advertisement -

ಧಾರವಾಡ: ಕಾಲೇಜು ಪ್ರಾಧ್ಯಾಪಕರೊಬ್ಬರಿಗೆ ಹನಿಟ್ರ್ಯಾಪ್​ ಮಾಡಿ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಆರೋಪಿಗಳಿಗೆ ಹುಬ್ಬಳ್ಳಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣಕ್ಕೆ ಇತ್ಯರ್ಥ ಹಾಡಿದೆ.

ಏನಿದು ಪ್ರಕರಣ:

2017 ರಲ್ಲಿ ಕಾಲೇಜು ಕಾರ್ಯಕ್ರಮವೊಂದಕ್ಕೆ ಹಾಡಲು ಬಂದ ಅನಘಾ ವಡವಿ ಎಂಬ ಯುವತಿ ಅಲ್ಲಿನ ಪ್ರಾಧ್ಯಾಪಕರಿಗೆ ಪರಿಚಯವಾಗುತ್ತಾಳೆ. ನಂತರ ಪರಿಚಯ ಸಲುಗೆಯಿಂದ ಮುಂದುವರೆದಿದ್ದು ಯುವತಿ ಆಗಾಗ ಅಧ್ಯಾಪಕರಿಂದ ಹಣ ಪಡೆಯುತ್ತಿದ್ದಳು ಎನ್ನಲಾಗಿದೆ. ಯುವತಿ ತನ್ನ ಇನ್ನಿತರ ಸಹಚರರಾದ ಗಣೇಶ್ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ ಹಜಾರೆ ಜೊತೆ ಸೇರಿ ಪ್ರಾದ್ಯಾಪಕರಿಗೆ ಹನಿಟ್ರ್ಯಾಪ್ ಮಾಡಿ ಹಣ ಕೀಳುವ ಸಂಚು ರೂಪಿಸುತ್ತಾಳೆ.

ಅದೇ ಪ್ರಕಾರ ಯುವತಿ ಅನಘಾ ಪ್ರಾಧ್ಯಾಪಕರಿಗೆ ನಗರದ ಕಾರವಾರ ರೋಡ ಬಳಿ ಬರಲು ಹೇಳಿದ್ದಾಳೆ. ಪ್ರಾಧ್ಯಾಪಕ ಯುವತಿ ಹೇಳಿದ ಸ್ಥಳಕ್ಕೆ ಬಂದಿದ್ದು ಅಲ್ಲಿಯೇ ಇದ್ದ ತನ್ನ ಸಹಚರರು ದಾಳಿ ಮಾಡಿ ನಮ್ಮ ಹುಡುಗಿಯನ್ನು ರೇಪ್​ ಮಾಡಲು ಪ್ರಯತ್ನ ಪಟ್ಟಿದ್ದಿಯಾ ಎಂದು ಆರೋಪಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಹೀಗೆ ಹೇಳಿ 5 ಲಕ್ಷ ರೂಗೆ ಬೇಡಿಕೆ ಇಟ್ಟದ್ದರು ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ಪ್ರಾಧ್ಯಾಪಕನ ಮೇಲೆ ಹಲ್ಲೆ ಮಾಡಿ ಹತ್ತಿರದ ಎಟಿಎಮ್​ ಗೆ ಕರೆದೊಯ್ದು, ಬಲವಂತವಾಗಿ ಪಾಸವರ್ಡ್​​ ಪಡೆದು ಹಣ ಡ್ರಾ ಮಾಡಿ ಸಿದ್ಧಾರೂಢ ಮಠದ ಹತ್ತಿರ ಬಿಸಾಡಿ ಹೋಗಿದ್ದರು.

ನಂತರ ಪ್ರಾಧ್ಯಾಪಕ ಹಳೇ ಹುಬ್ಬಳ್ಳಿ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನರಿತು ತೀವ್ರವಾಗಿ ವಿಚಾರಣೆ ನಡೆಸಿದ ಪೊಲೀಸರು ಇತ್ತಿಚೆಗೆ ಪ್ರಕರಣದ ಕುರತಂತೆ ಚಾರ್ಜ್​ಶೀಟ್​ ಕೂಡ ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ 5 ನೆ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನೀಡಿದ್ದು ಪ್ರಕರಣದ ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣಕ್ಕೆ ಅಂತ್ಯ ಹಾಡಿದೆ.

- Advertisement -

Related news

error: Content is protected !!