


ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಗೌರವ ಡಾಕ್ಟರೇಟ್ ನೀಡಿ, ಗೌರವಿಸಿದೆ.
ಕಳೆದ 1 ವರ್ಷದ ಹಿಂದೆಯೇ ಘಟಿಕೋತ್ಸವದಲ್ಲಿ ಸಿದ್ದರಾಮಯ್ಯರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ ಅದನ್ನು ಪಡೆಯಲು ಸಿದ್ದರಾಮಯ್ಯ ನಿರಾಕರಸಿದ್ದರು. ಇದೀಗ ಅವರು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ಈ ಬಾರಿ ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಮಾಜಿ ಕೇಂದ್ರ ಸಚಿವ ಆರ್ಎಲ್ ಜಾಲಪ್ಪ ಜನ್ಮದಿನ ಹಾಗೂ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಕಳೆದ ಒಂದು ವರ್ಷದ ಹಿಂದೆಯೇ ಕಾಲೇಜು ಘಟಿಕೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಆದರೆ ಅಂದು ಸಿಎಂ ಆಗಿ, ಅಧಿಕಾರ ನಡೆಸುತ್ತಿದ್ದ ಸಿದ್ದರಾಮಯ್ಯ, ಅದನ್ನು ನಿರಾಕರಿಸಿದ್ದರು. ಕೊನೆಗೆ ಗಣ್ಯರ ಒತ್ತಾಯದ ಮೇರೆಗೆ ಸಿದ್ದರಾಮಯ್ಯ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ.
ಗೌರವ ಡಾಕ್ಟರೇಟ್ ಸಿಕ್ಕಿರುವ ಕುರಿತು ಬಗ್ಗೆ ಭಾಷಣ ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಾನು ಈ ಹಿಂದೆ ಗೌರವ ಡಾಕ್ಟರೇಟ್ ಬೇಡ ಅಂತ ಹೇಳಿದ್ದೆ. ಸ್ವೀಕಾರ ಮಾಡೋದಾ ಬೇಡ್ವಾ ಅಂತ ಇದ್ದೆ. ಆದ್ರೂ ನನಗೆ RL ಜಾಲಪ್ಪ ಕಾಲೇಜಿನವರು ಗೌರವ ಡಾಕ್ಟರೇಟ್ ನೀಡಿದ್ದಾರೆ ಎಂದರು.
ನನಗೆ ಗೌರವ ಡಾಕ್ಟೇಟ್ ನೀಡಿದ RL ಜಾಲಪ್ಪ ಕಾಲೇಜಿನವರಿಗೆ ಧನ್ಯವಾದಗಳು. ಗೌರವ ಡಾಕ್ಟರೇಟ್ ಸಿಕ್ಕಿದ್ರೂ ನನಗೆ ಇನ್ಮುಂದೆಯೂ ಸಿದ್ದರಾಮಯ್ಯ ಅಂತಾನೆ ಕರೀರಿ. ಡಾ. ಸಿದ್ದರಾಮಯ್ಯ ಅಂತಾ ಯಾರೂ ನನ್ನನ್ನು ಕರಿಬೇಡಿ ಅಂತ ವೇದಿಕೆಯಲ್ಲಿ ನಗೆ ಚಟಾಕಿ ಹಾರಿಸಿದರು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








