- Advertisement -
- Advertisement -
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢದ ಮೇಲ್ಭಾಗದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಬುಧವಾರ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರ ಗುಂಪಿನ ಬಗ್ಗೆ ಮಾಹಿತಿ ಪಡೆದ ನಂತರ ಸೇನೆಯ ಮೊದಲ ಪ್ಯಾರಾ ಪಡೆಗಳು ಪೊಲೀಸರೊಂದಿಗೆ ಖಂಡಾರಾ ಮೇಲ್ಭಾಗಕ್ಕೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ.
ನಾಲ್ಕೈದು ಉಗ್ರರು ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅಡಗಿ ಕುಳಿತಿದ್ದ ಉಗ್ರರು ಮಧ್ಯಾಹ್ನ 12.50ರ ಸುಮಾರಿಗೆ ಶೋಧ ದಳದ ಮೇಲೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ.
- Advertisement -