Sunday, July 6, 2025
spot_imgspot_img
spot_imgspot_img

ಅಗ್ನಿ ಅವಘಡಕ್ಕೆ ದಾರುಣವಾಗಿ ಉಸಿರು ಚೆಲ್ಲಿದ ಕಂದಮ್ಮಗಳು- ಭಂಡಾರಾ ಆಸ್ಪತ್ರೆಯಲ್ಲಿ ಹೃದಯ ವಿದ್ರಾವಕ ಘಟನೆ!

- Advertisement -
- Advertisement -

ಮಹಾರಾಷ್ಟ್ರ: ಭಂಡಾರಾ ಜಿಲ್ಲಾಸ್ಪತ್ರೆಯ ಮಕ್ಕಳ ಘಟಕದಲ್ಲಿ ಅಗ್ನಿ ಅವಘಡ ನಡೆದ ಪರಿಣಾಮ ಹತ್ತು ನವಜಾತ ಶಿಶುಗಳು ಮೃತಪಟ್ಟ ಘಟನೆ ಮಧ್ಯರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ. ನವಜಾತ ಶಿಶುಗಳ ಆರೈಕೆ ಘಟಕದಲ್ಲಿ 17 ಮಕ್ಕಳು ದಾಖಲಾಗಿದ್ದರು. ರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಘಟಕದಲ್ಲಿ ಹೊಗೆ ಆವರಿಸಿತ್ತು. ಆಸ್ಪತ್ರೆ ಸಿಬ್ಬಂದಿ ಮಕ್ಕಳನ್ನು ರಕ್ಷಿಸಲು ಎಲ್ಲಾ ಪ್ರಯತ್ನವನ್ನು ನಡೆಸಿದರು.

ಈ ಘಟಣೆಯಲ್ಲಿ ಹತ್ತು ನವಜಾತ ಶಿಶುಗಳು ಮೃತಪಟ್ಟಿದ್ದಾರೆ ಮತ್ತು ಏಳು ಶಿಶುಗಳನ್ನು ರಕ್ಷಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರಾದ ಡಾ. ಪ್ರಮೋದ್ ರವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಜಿಲ್ಲಾಸ್ಪತ್ರೆಯ ಮಕ್ಕಳ ಘಟಕದಲ್ಲಿ ದಾಖಲಾದ ಶಿಶುಗಳು ಒಂದರಿಂದ ಮೂರು ತಿಂಗಳ ಪ್ರಾಯದವರಾಗಿದ್ದು, ವಾರ್ಡ್ ನಲ್ಲಿ ವಿಪರೀತ ಹೊಗೆ ತುಂಬಿದ್ದರಿಂದ ಶಿಶುಗಳ ಸಾವಿಗೆ ಕಾರಣವಾಗಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!